ADVERTISEMENT

ಬಫೆಟ್ ಇಂದು ಬೆಂಗಳೂರಿಗೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಬೆಂಗಳೂರು: ಅಮೆರಿಕದ ಖ್ಯಾತ ಬಂಡವಾಳ ಹೂಡಿಕೆದಾರ, ವಿಶ್ವದ ಮೂರನೇ ಅತಿದೊಡ್ಡ  ಶ್ರೀಮಂತ ಮತ್ತು ದಾನಿ ವಾರನ್ ಬಫೆಟ್ ಅವರು ಮಂಗಳವಾರ ಬೆಂಗಳೂರಿಗೆ ಆಗಮಿಸುವ ಮೂಲಕ ತಮ್ಮ ಮೂರು ದಿನಗಳ ಭಾರತ ಭೇಟಿಗೆ ಚಾಲನೆ ನೀಡಲಿದ್ದಾರೆ. ಲೋಹಗಳನ್ನು ಕತ್ತರಿಸುವ ಸಾಧನಗಳನ್ನು ತಯಾರಿಸುವ ಟ್ಯಾಗ್ಯುಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಐಎಂಸಿ ಸಮೂಹವು ಟ್ಯಾಗ್ಯುಟೆಕ್ ಬ್ರಾಂಡ್ ಹೆಸರಿನಲ್ಲಿ ಸಲಕರಣೆಗಳನ್ನು ತಯಾರಿಸುತ್ತಿದೆ. ಬಫೆಟ್ ಒಡೆತನದ ಆರ್ಥಿಕ ಒಕ್ಕೂಟವಾಗಿರುವ ಬರ್ಕ್‌ಶೈರ್ ಹ್ಯಾಥ್‌ವೇ  ಐಎಂಸಿ  ಸಮೂಹದಲ್ಲಿ ಪಾಲು ಹೊಂದಿದೆ. ಬಫೆಟ್ ಅವರ ಭಾರತ ಪ್ರವಾಸದ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯ ಇಲ್ಲ. ಬೆಂಗಳೂರಿನಿಂದ ನವದೆಹಲಿಗೆ ತೆರಳಲಿರುವ ಬಫೆಟ್, ಅಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಲಿದ್ದು, ಸಂಸತ್ ಸದಸ್ಯರ ಜೊತೆ ಉಪಾಹಾರ ಕೂಟದಲ್ಲಿ ಭಾಗಿಯಾಗಲಿದ್ದಾರೆ.

ಬರ್ಕ್‌ಶೈರ್ ಜೀವ ವಿಮಾ ಪಾಲಿಸಿದಾರರನ್ನೂ ಅವರು ಭೇಟಿಯಾಗಲಿದ್ದಾರೆ. ಫೋಬ್ಸ್ ನಿಯತಕಾಲಿಕೆ ಪ್ರಕಾರ, ವಾರನ್ ಬಫೆಟ್ ಅವರು 50 ಶತಕೋಟಿ ಡಾಲರ್‌ಗಳೊಂದಿಗೆ(್ಙ 2,25,000 ಕೋಟಿ) ವಿಶ್ವದ ಸಿರಿವಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.