ADVERTISEMENT

ಬಳಕೆದಾರರ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 19:30 IST
Last Updated 5 ನವೆಂಬರ್ 2012, 19:30 IST

ನವದೆಹಲಿ (ಪಿಟಿಐ): ಮೊಬೈಲ್ ಮೂಲಕ ಇಂಟರ್‌ನೆಟ್ ಬಳಸುವ ಗ್ರಾಹಕರ ಸಂಖ್ಯೆ ಭಾರತ, ಬ್ರೆಜಿಲ್, ಮತ್ತು ಅಮೆರಿಕದಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಪ್ರಸಿದ್ಧ ಸಾಮಾಜಿಕ ತಾಣ ಫೇಸ್‌ಬುಕ್ ಹೇಳಿದೆ.

ಮಾಸಿಕ ಸರಾಸರಿ 101 ಕೋಟಿ ಬಳಕೆದಾರರು ಮೊಬೈಲ್ ಮೂಲಕ ಫೇಸ್‌ಬುಕ್ ವೀಕ್ಷಿಸುತ್ತಾರೆ ಎಂದು ಅಮೆರಿಕದ ಷೇರು ವಿನಿಮಯ ಕೇಂದ್ರಕ್ಕೆ ಕಂಪೆನಿ ವರದಿ ಸಲ್ಲಿಸಿದೆ. ಆದರೆ, ಮೊಬೈಲ್ ಗ್ರಾಹಕರ ಮೂಲಕ ಫೇಸ್‌ಬುಕ್‌ಗೆ ಬರುತ್ತಿರುವ ವರಮಾನ ಮಾತ್ರ ಕನಿಷ್ಠ  ಮಟ್ಟದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.