ADVERTISEMENT

ಬಿಎಂಡಬ್ಲ್ಯು ಕಾರ್‌ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ನವನೀತ್ ಮೋಟರ್ಸ್‌ನ ನಿರ್ದೇಶಕರಾದ ಆಶೀಶ್‌ ಕಚಾಲಿಯಾ, ನವನೀತ್‌ ಕಚಾಲಿಯಾ ಮತ್ತು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ಮಾರಾಟ ನಂತರ ಸೇವಾ ವಿಭಾಗದ ನಿರ್ದೇಶಕ ಆ್ಯಂಡ್ರಿಯಾಸ್ ಹ್ಯಾಟನ್‍ಹಾರ್ಸ್ಟ್ ಅವರು ಕಾರ್‌ ಅನಾವರಣಗೊಳಿಸಿದರು
ನವನೀತ್ ಮೋಟರ್ಸ್‌ನ ನಿರ್ದೇಶಕರಾದ ಆಶೀಶ್‌ ಕಚಾಲಿಯಾ, ನವನೀತ್‌ ಕಚಾಲಿಯಾ ಮತ್ತು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ಮಾರಾಟ ನಂತರ ಸೇವಾ ವಿಭಾಗದ ನಿರ್ದೇಶಕ ಆ್ಯಂಡ್ರಿಯಾಸ್ ಹ್ಯಾಟನ್‍ಹಾರ್ಸ್ಟ್ ಅವರು ಕಾರ್‌ ಅನಾವರಣಗೊಳಿಸಿದರು   

ಬೆಂಗಳೂರು: ಜರ್ಮನಿಯ ವಿಲಾಸಿ ಕಾರ್‌ ತಯಾರಿಕಾ ಸಂಸ್ಥೆ ‘ಬಿಎಂಡಬ್ಲ್ಯು’ದ 6 ಸಿರೀಸ್ ಗ್ರ್ಯಾನ್ ಟುರಿಸ್ಮೊ ಸ್ಪೋರ್ಟ್ಸ ಲೈನ್‌ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದೆ.

ದೇಶೀಯವಾಗಿ ತಯಾರಿಸಿರುವ ಈ ಪೆಟ್ರೋಲ್‌ ಚಾಲಿತ ಕಾರ್‌ಗೆ ಬುಕಿಂಗ್‌ ಆರಂಭಗೊಂಡಿದೆ. ಇದರ ಎಕ್ಸ್‌ಷೋರೂಂ ಬೆಲೆ ₹58.90 ಲಕ್ಷ ಇದೆ. ಡೀಸೆಲ್‌ ಚಾಲಿತ ಕಾರ್‌ ಕೆಲ ತಿಂಗಳ ನಂತರ ಮಾರುಕಟ್ಟೆಗೆ ಬರಲಿದೆ. ದೆಹಲಿಯಲ್ಲಿ ನಡೆದಿದ್ದ ವಾಹನ ಮೇಳದಲ್ಲಿ ಈ ಕಾರನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. 250 ಎಚ್‌ಪಿ ಸಾಮರ್ಥ್ಯದ ಕಾರ್‌ 6.3 ಸೆಕೆಂಡುಗಳಲ್ಲಿ  ಪ್ರತಿ ಗಂಟೆಗೆ 0 ದಿಂದ 100 ಕಿ. ಮೀ ದೂರ ಕ್ರಮಿಸುವ ವೇಗ ಪಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT