ADVERTISEMENT

ಬಿಎಚ್‌ಇಎಲ್: ಮಹಾರತ್ನ ಸ್ಥಾನಮಾನಕ್ಕೆ ಅರ್ಹ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್), `ಮಹಾರತ್ನ~ ಸ್ಥಾನಮಾನ ಪಡೆಯಲು ಬೇಕಾದ ಎಲ್ಲಾ ಅರ್ಹತೆಗಳನ್ನು ಪಡೆದಿದೆ ಎಂದು ಸರ್ಕಾರಿ ಉದ್ದಿಮೆ ಇಲಾಖೆ ಹೇಳಿದೆ.

ಒಂದು ವೇಳೆ ಈ ಸ್ಥಾನಮಾನ ದೊರೆತರೆ `ಬಿಎಚ್‌ಇಎಲ್~ ಇನ್ನಷ್ಟು ಹೆಚ್ಚು ಆರ್ಥಿಕ ಸ್ವಾಯತ್ತತೆಯನ್ನು ಪಡೆಯಲಿದೆ.`ಮಹಾರತ್ನ~ ಸ್ಥಾನಮಾನ ನೀಡಲು ಬೇಕಾದಂತಹ ಎಲ್ಲಾ ಅರ್ಹತಾ ಮಾನದಂಡಗಳನ್ನು `ಬಿಎಚ್‌ಇಎಲ್~ ಪೂರೈಸಿದೆ~ ಎಂದು ಸರ್ಕಾರಿ ಉದ್ದಿಮೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರತ್ನ ಸ್ಥಾನಮಾನ ಪಡೆದಿರುವ ಕಂಪನಿಯು ಸಂಪುಟದ ಒಪ್ಪಿಗೆ ಪಡೆಯದೆರೂ5,000 ಕೋಟಿಗಳವರೆಗೆ ಬಂಡವಾಳ ಹೂಡುವ ನಿರ್ಧಾರವನ್ನು ತೆಗೆದುಕೊಳ್ಳಬಹುದು.ಪ್ರಸ್ತುತ `ಬಿಎಚ್‌ಇಎಲ್~ ನವರತ್ನ ಕಂಪನಿ ಸ್ಥಾನಮಾನ ಪಡೆದಿದೆ. ನವರತ್ನ ಸ್ಥಾನಮಾನ ಹೊಂದಿರುವ ಕಂಪನಿಗಳು ಸಚಿವ ಸಂಪುಟದ ಒಪ್ಪಿಗೆ ಇಲ್ಲದೇರೂ1,000 ಕೋಟಿಗಳವರೆಗೆ ಮಾತ್ರ ಬಂಡವಾಳ ಹೂಡಬಹುದು.

ಭಾರಿ ಕೈಗಾರಿಕಾ ಸಚಿವಾಲಯ ಮತ್ತು `ಬಿಎಚ್‌ಇಎಲ್~ನ ಆಡಳಿತಾತ್ಮಕ ಸಚಿವಾಲಯವು ಮೊದಲಿಗೆ ಮಹಾರತ್ನ ಸ್ಥಾನಮಾನಕ್ಕಾಗಿ ಸರ್ಕಾರಿ ಉದ್ದಿಮೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿ ಹೇಳಿದ್ದಾರೆ.

ಮಹಾರತ್ನ ಸ್ಥಾನಮಾನ ಪಡೆಯಲು ಅರ್ಹತೆ ಗಳಿಸಬೇಕಾದರೆ ಸರ್ಕಾರಿ ಸ್ವಾಮ್ಯದ ಕಂಪನಿಯೊಂದರ ಕಳೆದ ಮೂರು ವರ್ಷಗಳ ವಾರ್ಷಿಕ ನಿವ್ವಳ ಸರಾಸರಿ ಲಾಭ ರೂ5,000 ಕೋಟಿ ಇರಬೇಕು.

ಸರ್ಕಾರಿ ಉದ್ದಿಮೆ ಇಲಾಖೆಯ ಇತರ ಮಾರ್ಗದರ್ಶನ ಸೂತ್ರಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ  ಕಂಪನಿಯೊಂದರ ಮೂರು ವರ್ಷಗಳ ಸರಾಸರಿ ವಹಿವಾಟುರೂ25,000  ಕೋಟಿ ಇರಬೇಕು. ಅಲ್ಲದೇ ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಕಂಪನಿಯ ಸರಾಸರಿ ನಿವ್ವಳ ಸಂಪತ್ತುರೂ15,000ಕೋಟಿ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.