ನವದೆಹಲಿ (ಪಿಟಿಐ): ಹಣದುಬ್ಬರ ಹಿತಕರ ಮಟ್ಟಕ್ಕೆ ಇಳಿಯುವವರೆಗೆ ಬಿಗಿ ವಿತ್ತೀಯ ನೀತಿಯನ್ನೇ ಮುಂದುವರೆಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ.
ಸದ್ಯಕ್ಕೆ ಒಟ್ಟಾರೆ ಹಣದುಬ್ಬರ ದರವು `ಆರ್‌ಬಿಐ~ ಅಂದಾಜಿಸಿರುವ ಹಿತಕರ ಮಟ್ಟಕ್ಕಿಂತ (ಶೇ 6) ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ದಿನಗಳ ಕಾಲ ಬಿಗಿ ವಿತ್ತೀಯ ಧೋರಣೆಯನ್ನೇ ಮುಂದುವರೆಸಲು ನಿರ್ಧರಿಸಿದ್ದೇವೆ ಎಂದು `ಆರ್‌ಬಿಐ~ನ ಡೆಪ್ಯುಟಿ ಗವರ್ನರ್ ಕೆ.ಸಿ ಚಕ್ರವರ್ತಿ ಇಲ್ಲಿ ನಡೆದ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ದರ ಫೆಬ್ರುವರಿ ತಿಂಗಳಲ್ಲಿ ಶೇ 6.95ರಷ್ಟಾಗಿದ್ದು, ಮತ್ತೆ ಏರುವ ಸೂಚನೆಗಳು ಕಂಡುಬರುತ್ತಿದೆ. ಇದರಿಂದ ಮುಂದಿನ ಹಣಕಾಸು ಪರಾಮರ್ಶೆಯಲ್ಲೂ ಅಲ್ಪಾವಧಿ ಬಡ್ಡಿ ದರ ತಗ್ಗಿಸುವುದಿಲ್ಲ ಎನ್ನುವ ಸುಳಿವನ್ನು `ಆರ್‌ಬಿಐ~ ಈ ಮೂಲಕ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.