ADVERTISEMENT

ಬ್ಯಾಂಕ್‌ಗಳಿಗೆ 1.5ಲಕ್ಷ ಕೋಟಿ ಬಂಡವಾಳ ಅಗತ್ಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST

ಹೈದರಾಬಾದ್ (ಪಿಟಿಐ): `ಬಾಸೆಲ್-3~ ನಿಯಮ ಪಾಲನೆಗೆ ದೇಶದ ಬ್ಯಾಂಕುಗಳಿಗೆ ಇನ್ನೂ ರೂ.5 ಲಕ್ಷ ಕೋಟಿ ಬಂಡವಾಳದ ಅಗತ್ಯವಿದೆ.  ಕೇಂದ್ರವು, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿನ ತನ್ನ ಪಾಲನ್ನು ತಗ್ಗಿಸುವ ಮೂಲಕ  ಈ ಗುರಿ ಮುಟ್ಟಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಡಿ.ಸುಬ್ಬರಾವ್ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಲೆಕ್ಕಪತ್ರ ಮಾನದಂಡವಾದ `ಬಾಸೆಲ್-3~ ನಿಯಮ2018ರ ಮಾರ್ಚ್ 31ರಿಂದ  ಜಾರಿಗೆ ಬರಲಿದೆ. 2008ರ ಜಾಗತಿಕ ಆರ್ಥಿಕ ಹಿಂಜರಿತ ನಂತರ ಬ್ಯಾಂಕುಗಳ ಬಂಡವಾಳ ಸಾಮರ್ಥ್ಯ ಹೆಚ್ಚಿಸಲು ಈ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಬಂಡವಾಳ ಕ್ರೋಢೀಕರಿಸಲು ಯತ್ನಿಸಬೇಕು ಎಂದರು.

ಪರಿಕರ ತಯಾರಿಕೆ ಮತ್ತು ಕೈಗಾರಿಕೆ ವಲಯದ ಪ್ರಗತಿ ಕುಂಠಿತವಾಗಿರುವುದು ಹಾಗೂ ಡಾಲರ್ ಎದುರು ರೂಪಾಯಿ ಅಪಮೌಲ್ಯ, ವಿದೇಶಿ ವಿನಿಮಯ ಸಂಗ್ರಹ ಏರಿಳಿತ ಸೇರಿದಂತೆ ಹಲವು ಸಂಗತಿಗಳು ದೇಶೀಯ ಆರ್ಥಿಕತೆ ಮೇಲೆ ಪರಿಣಾಮ ಬೀರಿವೆ ಎಂದು ಸುಬ್ಬರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.