ADVERTISEMENT

ಬ್ಯಾಂಕ್‌ ವಿಲೀನಕ್ಕೆ ಸಮ್ಮತಿ

ಪಿಟಿಐ
Published 21 ಮಾರ್ಚ್ 2017, 19:30 IST
Last Updated 21 ಮಾರ್ಚ್ 2017, 19:30 IST
ನವದೆಹಲಿ: ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ  , ಭಾರತೀಯ ಮಹಿಳಾ ಬ್ಯಾಂಕ್‌ (ಬಿಎಂಬಿ) ವಿಲೀನಗೊಳ್ಳಲು ಕೇಂದ್ರ ಸರ್ಕಾರ ತನ್ನ ಅನುಮೋದನೆ ನೀಡಿದೆ.
 
3ವರ್ಷದ ಹಿಂದೆ ಈ ಬ್ಯಾಂಕ್‌ ಅಸ್ತಿತ್ವಕ್ಕೆ ಬಂದಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಹಿಳೆಯರೇ ನಿರ್ವಹಿಸುವ 126 ಶಾಖೆಗಳನ್ನು ಎಸ್‌ಬಿಐ ದೇಶದಾದ್ಯಂತ ಹೊಂದಿದೆ.  

ಬಿಎಂಬಿ ಕೇವಲ 7 ಶಾಖೆ ಹೊಂದಿದೆ. ‘ಬಿಎಂಬಿ’ಯ ಆಡಳಿತಾತ್ಮಕ ಮತ್ತು ನಿರ್ವಹಣಾ ವೆಚ್ಚ ಹೆಚ್ಚಿಗೆ ಇದೆ. ಇದೇ ವೆಚ್ಚದಲ್ಲಿ ಎಸ್‌ಬಿಐ ಮೂಲಕ ‘ಬಿಎಂಬಿ’ಗಿಂತ ಹೆಚ್ಚು ಸಾಲ ವಿತರಿಸಲು ಸಾಧ್ಯವಾಗಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.