ADVERTISEMENT

ಭಾರತದಲ್ಲಿ ತಯಾರಿಸಿ: ಫ್ರಾನ್ಸ್‌ ಬಲ

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 19:30 IST
Last Updated 25 ಜನವರಿ 2016, 19:30 IST
ವಾಣಿಜ್ಯಗೋಷ್ಠಿಯಲ್ಲಿ ಫಿಕ್ಕಿ ಅಧ್ಯಕ್ಷ ಹರ್ಷವರ್ಧನ್‌ ನಿಯೋಟಿಯಾ ಮತ್ತು ಫ್ರಾನ್ಸ್‌ ಹಣಕಾಸು ಸಚಿವ ಮೈಕೆಲ್‌ ಸಪಿನ್‌  ಇದ್ದರು                -ಪಿಟಿಐ ಚಿತ್ರ
ವಾಣಿಜ್ಯಗೋಷ್ಠಿಯಲ್ಲಿ ಫಿಕ್ಕಿ ಅಧ್ಯಕ್ಷ ಹರ್ಷವರ್ಧನ್‌ ನಿಯೋಟಿಯಾ ಮತ್ತು ಫ್ರಾನ್ಸ್‌ ಹಣಕಾಸು ಸಚಿವ ಮೈಕೆಲ್‌ ಸಪಿನ್‌ ಇದ್ದರು -ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಭಾರತದಲ್ಲಿರುವ 400 ಕ್ಕೂ ಹೆಚ್ಚು ಫ್ರಾನ್ಸ್‌ ಕಂಪೆನಿಗಳು ಐದು ವರ್ಷಗಳಲ್ಲಿ ₹120 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಹೂಡಿವೆ ಎಂದು ಫ್ರಾನ್ಸ್‌ ಹಣಕಾಸು ಸಚಿವ ಮೈಕೆಲ್‌ ಸಪಿನ್‌ ಹೇಳಿದರು.

ಕೈಗಾರಿಕಾ ಹಾಗೂ ತಯಾರಿಕಾ ವಲಯದಲ್ಲಿ ಮುಂದಿನ ಐದು ವರ್ಷಗಳಲ್ಲಿ ₹ 68 ಸಾವಿರ ಕೋಟಿ ಬಂಡವಾಳ ಹೂಡಲಿದ್ದು ‘ಭಾರತದಲ್ಲಿ ತಯಾರಿಸಿ’ ಕಾರ್ಯಕ್ರಮಕ್ಕೆ ಹೆಚ್ಚಿನ ಬಲ ದೊರೆಯಲಿದೆ ಎಂದರು. 


ಭಾರತೀಯ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟ (ಫಿಕ್ಕಿ)  ಸೋಮವಾರ ಆಯೋಜಿಸಿದ್ದ ಇಂಡಿಯಾ –ಫ್ರಾನ್ಸ್‌ ವಾಣಿಜ್ಯ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 2020–22ರ ವೇಳೆಗೆ ಭಾರತದ ಒಟ್ಟು ಸೌರಶಕ್ತಿ ವಿದ್ಯುತ್‌ ಉತ್ಪಾದನೆಯಲ್ಲಿ ಫ್ರಾನ್ಸ್‌ ಕಂಪೆನಿಗಳ ಪಾಲು ಶೇ 10ರಷ್ಟಿರಲಿದೆ ಎಂದರು.  ಅತಿಹೆಚ್ಚು ಹೂಡಿಕೆ ಮಾಡಿದ ರಾಷ್ಟ್ರ ಗಳಲ್ಲಿ ಫ್ರಾನ್ಸ್‌ 3ನೇ ಸ್ಥಾನದಲ್ಲಿ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT