ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ಶೇ. 7ರ ಮಟ್ಟಕ್ಕೆ ಬೆಳವಣಿಗೆ ಕಾಣಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್(ಎಡಿಬಿ) ತನ್ನ 2012ರ ಏಷ್ಯಾ ಅಭಿವೃದ್ಧಿ ಚಿತ್ರಣ ವರದಿಯಲ್ಲಿ ವಿಶ್ಲೇಷಿಸಿದೆ.
2011-12ರಲ್ಲಿ ಶೇ. 6.9ರಷ್ಟಿದ್ದ ಭಾರತದ ಆರ್ಥಿಕ ಪ್ರಗತಿ ಪ್ರಮಾಣ, ಸದ್ಯ ಜಾಗತಿಕ ವಿದ್ಯಾಮಾನ ಸುಸ್ಥಿರವಾಗಿರುವುದರಿಂದ ಅಲ್ಪ ಚೇತರಿಕೆ ಕಾಣಲಿದೆ ಎಂದು ಎಡಿಬಿಯ ಮುಖ್ಯ ಆರ್ಥಿಕತಜ್ಞ ಛಾಂಗ್‌ಯಾಂಗ್ ರೀ ಹೇಳಿದ್ದಾರೆ.
ಇದೇ ಗತಿಯಲ್ಲಿ ಸಾಗಿದಲ್ಲಿ ಭಾರತದ ಒಟ್ಟಾರೆ ಆಂತರಿಕ ಉತ್ಪಾದನೆ ಪ್ರಮಾಣ(ಜಿಡಿಪಿ) 2013-14ರ ವೇಳೆಗೆ ಶೇ. 7.5ರ ಮಟ್ಟ ಮುಟ್ಟುವುದರಲ್ಲಿ ಅನುಮಾನವೇನಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.