ADVERTISEMENT

ಮರಳಿದ ಖರೀದಿ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 17:35 IST
Last Updated 3 ಫೆಬ್ರುವರಿ 2011, 17:35 IST

ಮುಂಬೈ (ಪಿಟಿಐ): ಸತತ 2ನೇ ದಿನವೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಏರಿಕೆ ದಾಖಲಿಸಿರುವುದರಿಂದ ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಮರಳಿದಂತಾಗಿದೆ.

ಸೂಚ್ಯಂಕವು ದಿನದ ವಹಿವಾಟಿನಲ್ಲಿ  358 ಅಂಶಗಳಷ್ಟು ಏರಿಕೆ ದಾಖಲಿಸಿ 18,449 ಅಂಶಗಳೊಂದಿಗೆ   ವಹಿವಾಟು ಪೂರ್ಣಗೊಳಿಸಿತು. ಇದು ಈ ವರ್ಷದ ಇದುವರೆಗಿನ ಗರಿಷ್ಠ ಗಳಿಕೆ ಇದಾಗಿದೆ. ರಿಯಾಲ್ಟಿ, ಭಾರಿ ಯಂತ್ರೋಪಕರಣ, ಲೋಹ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳಲ್ಲಿ ಖರೀದಿ ಆಸಕ್ತಿ ಕಂಡು ಬಂದಿತು. ಜಾಗತಿಕ ಅರ್ಥ ವ್ಯವಸ್ಥೆಯ ಚೇತರಿಕೆ ಬಗ್ಗೆ ಆಶಾದಾಯಕ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಹೂಡಿಕೆದಾರರು ಹಣದುಬ್ಬರ ಮತ್ತು ಬ್ಯಾಂಕ್ ಬಡ್ಡಿ ದರ ಹೆಚ್ಚಳ ಕುರಿತ ಕಳವಳ ನಿರ್ಲಕ್ಷಿಸಿದ್ದಾರೆ.

 ಅಗ್ಗದ ದರದಲ್ಲಿ ದೊರೆಯುತ್ತಿರುವ ಷೇರುಗಳ ಖರೀದಿಗೆ ದೇಶಿ ನಿಧಿಗಳು ಆಸಕ್ತಿ ತೋರಿಸಿದ್ದರಿಂದ ಸೂಚ್ಯಂಕ ಏರುಗತಿಯಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.