ADVERTISEMENT

ಮಳೆ ಕುಂಠಿತ: ಕುಕ್ಕುಟ ಆಹಾರ ದುಬಾರಿ ಸಂಭವ

​ಪ್ರಜಾವಾಣಿ ವಾರ್ತೆ
Published 31 ಜುಲೈ 2012, 19:30 IST
Last Updated 31 ಜುಲೈ 2012, 19:30 IST
ಮಳೆ ಕುಂಠಿತ: ಕುಕ್ಕುಟ ಆಹಾರ ದುಬಾರಿ ಸಂಭವ
ಮಳೆ ಕುಂಠಿತ: ಕುಕ್ಕುಟ ಆಹಾರ ದುಬಾರಿ ಸಂಭವ   

ಮುಂಬೈ(ಪಿಟಿಐ): ಮುಂಗಾರು ಮಳೆ ಕೊರತೆ ಕೃಷಿ ಕ್ಷೇತ್ರಕ್ಕಷ್ಟೇ ಅಲ್ಲ, ಕುಕ್ಕುಟ ಉದ್ಯಮಕ್ಕೂ ಸಂಕಷ್ಟ ತಂದೊಡ್ಡಲಿದೆ!

ಮಳೆ ಇಲ್ಲದೆ ಬೆಳೆ ಇಲ್ಲ. ಕೋಳಿ ಆಹಾರಕ್ಕೆ ಮಿಶ್ರ ಮಾಡುವ ಮುಸುಕಿನ ಜೋಳ, ಸೋಯಾ ಮತ್ತಿತರ ಧಾನ್ಯಗಳ ಕೊರತೆಯಾಗಲಿದೆ. ಪರಿಣಾಮ ಕೋಳಿ ಆಹಾರದ ಧಾರಣೆ ದುಪ್ಪಟ್ಟಾಗಲಿದೆ.

ಕೋಳಿ ಆಹಾರ  ಧಾರಣೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 18ರಷ್ಟು ಹೆಚ್ಚಳವಾಗಿದೆ. ಮಳೆ ಕೈಕೊಟ್ಟಿರುವುದರಿಂದ ಮುಂಬರುವ ದಿನಗಳಲ್ಲಿ ಕೋಳಿ ಆಹಾರದ ಬೆಲೆ ಶೇ 69ರವರೆಗೂ ಹೆಚ್ಚುವ ಸಂಭವವಿದೆ ಎಂದು ಸಂಶೋಧನಾ ಸಂಸ್ಥೆ   ನೊಮುರಾ~ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.