ADVERTISEMENT

ಮಹಿಳೆಗೆ ಸಿಗದ ಪ್ರಾತಿನಿಧ್ಯ: ರಾಷ್ಟ್ರಪತಿ ವಿಷಾದ

ಪಿಟಿಐ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಭಾಗವಹಿಸಿದ್ದರು. ಸನ್ಮಾನಿತ ಮಹಿಳಾ ಸಾಧಕಿಯರು ಮತ್ತು ‘ಫಿಕ್ಕಿ’ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಚಿತ್ರದಲ್ಲಿ ಇದ್ದಾರೆ –ಪಿಟಿಐ ಚಿತ್ರ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಭಾಗವಹಿಸಿದ್ದರು. ಸನ್ಮಾನಿತ ಮಹಿಳಾ ಸಾಧಕಿಯರು ಮತ್ತು ‘ಫಿಕ್ಕಿ’ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಚಿತ್ರದಲ್ಲಿ ಇದ್ದಾರೆ –ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ‘ಉದ್ಯಮ ವಲಯದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿರುವುದು ವಿಷಾದಕರ ಸಂಗತಿಯಾಗಿದೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಹೇಳಿದ್ದಾರೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ಮಹಿಳಾ ಸಂಘಟನೆ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ‘ಮಹಿಳೆಯರು ಮನೆ ಮತ್ತು ಕಚೇರಿಗಳಲ್ಲಿ ದುಡಿಯುತ್ತ ದೇಶಿ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಆದರೆ, ಉದ್ದಿಮೆ ಕ್ಷೇತ್ರದಲ್ಲಿ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸ್ಥಾನಮಾನ ದೊರೆಯುತ್ತಿಲ್ಲ’ ಎಂದರು.

‘ಮಹಿಳೆಯರು ಉದ್ಯಮ ವಲಯದಲ್ಲಿ ಯಶಸ್ಸು ಸಾಧಿಸಲು ನೆರವಾಗುವಂತಹ ಮಹಿಳಾ ಸ್ನೇಹಿಯಾದ ಉಪಕ್ರಮಗಳನ್ನು ಕಾರ್ಪೊರೇಟ್‌ ಜಗತ್ತು ಕೈಗೊಳ್ಳಬೇಕು. ದುಡಿಯುವ ವರ್ಗದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದರೆ ಅದರಿಂದ ಕೌಟುಂಬಿಕ ವರಮಾನ ಮತ್ತು ಜಿಡಿಪಿ ಹೆಚ್ಚಳಗೊಳ್ಳಲಿದೆ. ಮಹಿಳೆಯರಲ್ಲಿ ಉದ್ಯಮಶೀಲತೆ ಪ್ರವೃತ್ತಿ ಬೆಳೆಸುವಂತಹ ಕ್ರಮಗಳನ್ನು ಸರ್ಕಾರ ಜಾರಿಗೆ ತರಬೇಕು’ ಎಂದು ಸಲಹೆ ನೀಡಿದರು. ಉದ್ಯಮಿ ಟ್ವಿಂಕಲ್ ಖನ್ನಾ, ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ್‌, ವಿಜ್ಞಾನಿ ಟೆಸ್ಸಿ ಥಾಮಸ್‌ ಸೇರಿದಂತೆ 9 ಮಂದಿ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.