ADVERTISEMENT

ಮುಂದಿನ ಹಣಕಾಸು ವರ್ಷ 55ಶಾಖೆ: ಬಿಎಂಬಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಪಣಜಿ(ಪಿಟಿಐ): ಭಾರತೀಯ ಮಹಿಳಾ ಬ್ಯಾಂಕ್‌(ಬಿಎಂಬಿ), ಮುಂದಿನ ಹಣಕಾಸು ವರ್ಷದಲ್ಲಿ ದೇಶದ ವಿವಿಧೆಡೆ ಹೊಸದಾಗಿ 55 ಶಾಖೆಗಳನ್ನು ಆರಂಭಿಸುವುದಾಗಿ ಹೇಳಿದೆ. ಆ ಮೂಲಕ ಮತ್ತಷ್ಟು ಮಹಿಳೆಯರಿಗೆ ಉದ್ಯೋಗದ ಅವಕಾಶ ಸೃಷ್ಟಿಸಿಕೊಡಲು ಮುಂದಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯದ (ಮಾರ್ಚ್ 31) ವೇಳೆಗೆ ಬ್ಯಾಂಕ್‌ನ ಒಟ್ಟು ಶಾಖೆಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಲಿದ್ದೇವೆ. 2014; 15ನೇ ಹಣಕಾಸು ವರ್ಷದಲ್ಲಿ ಎರಡನೇ ಶ್ರೇಣಿ ನಗರಗಳು ಮತ್ತು ಬ್ಯಾಂಕ್‌ ಶಾಖೆಗಳೇ ಇಲ್ಲದ ಪ್ರದೇಶಗಳಲ್ಲಿ ಒಟ್ಟು 55 ಶಾಖೆ ಗಳನ್ನು ಆರಂಭಿಸಲಿದ್ದೇವೆ ಎಂದು ‘ಬಿಎಂಬಿ’ ಅಧ್ಯಕ್ಷೆ ಉಷಾ ಅನಂತಸುಬ್ರ ಹ್ಮಣ್ಯನ್‌ ಸುದ್ದಿಗಾರರಿಗೆ ತಿಳಿಸಿದರು.

ಇಲ್ಲಿ ‘ಬಿಎಂಬಿ’ಯ 14ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್‌ನಲ್ಲಿ ಪುರುಷ ಮಹಿಳೆ ಇಬ್ಬರಿಗೂ ಖಾತೆ ಆರಂಭಿಸಲು ಅವಕಾಶವಿದೆ. ಇಬ್ಬರಿಂದಲೂ ಠೇವಣಿ ಸಂಗ್ರಹಿಸುತ್ತಿದ್ದೇವೆ. ಆದರೆ, ಸಾಲ ವಿತರಣೆಯಲ್ಲಿ ಮಹಿಳೆಯರಿಗೇ ಆದ್ಯತೆ. ಏಕೆಂದರೆ ಅವರು ಸಾಲ ಬಾಕಿ ಉಳಿಸಿಕೊಳ್ಳುವವರಲ್ಲ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.