ADVERTISEMENT

ಮುಂಬೈ; ಚಿನ್ನದ ಧಾರಣೆರೂ550 ಇಳಿಕೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST

ಮುಂಬೈ(ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ ಧಾರಣೆ ಗರಿಷ್ಠರೂ550ವರೆಗೂ ತಗ್ಗಿತು. ರೂಪಾಯಿ ಬಲ ಪಡೆದುಕೊಂಡಿದ್ದು ಹಾಗೂ ಷೇರುಪೇಟೆಯಲ್ಲಿ ಭಾರಿ ಚೇತರಿಕೆ ಕಂಡುಬಂದಿದ್ದರಿಂದ ಚಿನ್ನ ಸಂಗ್ರಹಗಾರರು ಮತ್ತು ವರ್ತಕರು ತಮ್ಮಲ್ಲಿದ್ದ ಸರಕನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ಆರಂಭಿಸಿದರು. ಇದರಿಂದ ಧಾರಣೆ ದಿಢೀರ್‌ ತಗ್ಗಿತು.

ಸ್ಟಾಂಡರ್ಡ್ ಚಿನ್ನರೂ550ರಷ್ಟು ಕಡಿಮೆ ಆಗಿ 10 ಗ್ರಾಂಗೆರೂ30,420ಕ್ಕೂ, ಅಪರಂಜಿ ಚಿನ್ನರೂ525ರಷ್ಟು ತಗ್ಗಿರೂ30,585ಕ್ಕೂ ಬಂದಿತು. ಬೆಳ್ಳಿಯೂರೂ1985ರಷ್ಟು ಬೆಲೆ ಕಳೆದುಕೊಂಡು ಕೆ.ಜಿ.ಗೆರೂ53,685ಕ್ಕೆ ಇಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.