ನವದೆಹಲಿ(ಪಿಟಿಐ): ದೀರ್ಘಾವಧಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ ರಚಿಸಲಾಗಿರುವ ದೇಶದ ಮೊಟ್ಟ ಮೊದಲ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಐಡಿಎಫ್)ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ.
ಸುಮಾರುರೂ10 ಸಾವಿರ ಕೋಟಿ ಬಂಡವಾಳ ಹೂಡಿಕೆಯೊಂದಿಗೆ `ಐಡಿಎಫ್~ ಸ್ಥಾಪಿಸಲು ನಾಲ್ಕು ಪ್ರಮುಖ ಹಣಕಾಸು ಸಂಸ್ಥೆಗಳಾದ ಬ್ಯಾಂಕ್ ಆಫ್ ಬರೋಡ (ಬಿಒಬಿ), ಐಸಿಐಸಿಐ ಬ್ಯಾಂಕ್, ಎಲ್‌ಐಸಿ ಮತ್ತು ಸಿಟಿ ಫೈನಾನ್ಶಿಯಲ್ ಒಪ್ಪಿಗೆ ಸೂಚಿಸಿದ್ದು, ಇಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ.
ರೂ300 ಕೋಟಿ ಮೊತ್ತದ ಷೇರು ಬಂಡವಾಳ ಹೊಂದಿರುವ ದೇಶದ ಮೊದಲ `ಐಡಿಎಫ್~ ಇದಾಗಿದ್ದು, ಮುಂದಿನ ಹಣಕಾಸು ವರ್ಷದ ಆರಂಭದಿಂದ ಕಾರ್ಯಾರಂಭ ಮಾಡಲಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಅಧ್ಯಕ್ಷ ಎಂ.ಡಿ ಮಲ್ಯ ತಿಳಿಸಿದ್ದಾರೆ.
`ಐಡಿಎಫ್~ನಲ್ಲಿಐಸಿಐಸಿಐ ಬ್ಯಾಂಕ್ ಶೇ 31, ಬ್ಯಾಂಕ್ ಆಫ್ ಬರೋಡ ಶೇ 30, ಸಿಟಿ ಫೈನಾನ್ಶಿಯಲ್ ಶೇ 29 ಮತ್ತು ಎಲ್‌ಐಸಿ ಶೇ 10ರಷ್ಟು ಪಾಲು ಹೊಂದಿವೆ.
12ನೇ ಪಂಚವಾರ್ಷಿಕ ಯೋಜನೆ ಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲು ಸರ್ಕಾರ `ಮೂಲಸೌಕರ್ಯ ಅಭಿವೃದ್ಧಿ ನಿಧಿ~ ಸ್ಥಾಪಿಸುವ ಪ್ರಸ್ತಾವ ಇಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.