ADVERTISEMENT

ರಕ್ಷಣಾ ನೀತಿ: ಡಬ್ಲ್ಯುಟಿಒ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ಜಿನಿವಾ (ಎಎಫ್‌ಪಿ):ಇತ್ತೀಚೆಗೆ ಪ್ರಪಂಚದ ಕೆಲವು ಭಾಗಗಳಿಂದ ವರದಿಯಾಗುತ್ತಿರುವ `ಆರ್ಥಿಕ ರಕ್ಷಣಾ ನೀತಿ~ಯು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಎಚ್ಚರಿಕೆ ನೀಡಿದೆ.
ಸದ್ಯದ ಜಾಗತಿಕ ಪರಿಸ್ಥಿತಿಯಲ್ಲಿ ಕೆಲವು ದೇಶಗಳು ಅನುಸರಿಸುತ್ತಿರುವ ಈ  ರಕ್ಷಣಾ ನೀತಿ ಅಪಾಯಕಾರಿ ಪ್ರವೃತ್ತಿ. ಜಾಗತಿಕ ನಾಯಕರು ಇದನ್ನು ತಡೆಯಲು ಸಂಘಟಿತ ಪ್ರಯತ್ನ ನಡೆಸಬೇಕು ಎಂದೂ `ಡಬ್ಲ್ಯುಟಿಒ~ ಆಗ್ರಹಿಸಿದೆ.

ಸ್ವದೇಶಿ ಕೈಗಾರಿಕೆಗಳನ್ನು ವಿದೇಶಿ ಪೈಪೋಟಿಯಿಂದ ರಕ್ಷಿಸಲು, ವಿದೇಶಿ ಸರಕುಗಳ ಮೇಲೆ ನಿರ್ಬಂಧ ಅಥವಾ ದೊಡ್ಡ ಪ್ರಮಾಣದಲ್ಲಿ ಆಮದು ತೆರಿಗೆ ಹೇರುವ ಆರ್ಥಿಕ ರಕ್ಷಣಾ ನೀತಿಯನ್ನು ಕೆಲವು ದೇಶಗಳು ಅನುಸರಿಸುತ್ತಿವೆ.
ಇದರಿಂದ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟಿಗೆ ಧಕ್ಕೆಯಾಗುತ್ತದೆ ಎಂದು ಸಂಘಟನೆ ಹೇಳಿದೆ.
ಹೆಚ್ಚುತ್ತಿರುವ ಹಣದುಬ್ಬರ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು  ದೇಶೀಯ ಪೂರೈಕೆ ಹೆಚ್ಚಿಸುವ ಸಲುವಾಗಿ ಆರ್ಥಿಕ ರಕ್ಷಣಾ ನೀತಿ ಅನುಸರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.