ADVERTISEMENT

ರಾಜೇಶ್ ಎಕ್ಸ್‌ಪೋರ್ಟ್ ದಾಖಲೆ ವಹಿವಾಟು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಬೆಂಗಳೂರು: ಚಿನ್ನಾಭರಣ ತಯಾರಿಕೆಯ ವಿಶ್ವದ ಅತಿದೊಡ್ಡ ಸಂಸ್ಥೆಯಾಗಿರುವ ಬೆಂಗಳೂರು ಮೂಲದ ರಾಜೇಶ್ ಎಕ್ಸ್‌ಪೋರ್ಟ್, ಡಿಸೆಂಬರ್ ತಿಂಗಳ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ್ಙ 6518 ಕೋಟಿಗಳಷ್ಟು ವರಮಾನ ಗಳಿಸಿದೆ.

ಕಳೆದ ವರ್ಷದ ವರಮಾನಕ್ಕೆ ಹೋಲಿಸಿದರೆ ಇದೊಂದು ದಾಖಲೆ ಹೆಚ್ಚಳವಾಗಿದೆ. ನಿವ್ವಳ ಲಾಭವು ಕೂಡ ದಾಖಲೆ ಎನ್ನಬಹುದಾದ ್ಙ 114 ಕೋಟಿಗಳಷ್ಟಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಜೇಶ್ ಮೆಹ್ತಾ, ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ರಫ್ತು ಹೆಚ್ಚಳ ಮತ್ತು ಚಿನ್ನಾಭರಣಗಳ ಚಿಲ್ಲರೆ ವಹಿವಾಟಿನಲ್ಲಿನ ಹೆಚ್ಚಳವೇ ಈ ದಾಖಲೆ ಪ್ರಮಾಣದ ವಹಿವಾಟಿಗೆ ಕಾರಣ. ರಾಜ್ಯದಲ್ಲಿನ 70 ಶುಭ್ ಮಳಿಗೆಗಳಲ್ಲಿ ವಹಿವಾಟು ಗಮನಾರ್ಹವಾಗಿ ಹೆಚ್ಚಳಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.