ಮುಂಬೈ (ಪಿಟಿಐ): ಡಾಲರ್ ಎದುರು ರೂಪಾಯಿ ಕಳೆದ ಕೆಲವು ವಾರಗಳಿಂದ ಬಹಳ ದುರ್ಬಲಗೊಳ್ಳುತ್ತಿದೆ. ಶುಕ್ರವಾರವಂತೂ 37 ಪೈಸೆಗಳಷ್ಟು ಭಾರಿ ಕುಸಿತ ಕಂಡ ರೂ ಮೌಲ್ಯ, ಮೂರು ತಿಂಗಳ ಹಿಂದಿನ ಮಟ್ಟವಾದ ರೂ52.15ಕ್ಕೆ ಇಳಿಕೆ ಕಂಡಿದೆ.
ಬ್ಯಾಂಕ್‌ಗಳು, ಮತ್ತು ತೈಲ ಆಮದುದಾರರಿಂದ ಡಾಲರ್ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿರುವುದೇ ರೂಪಾಯಿ ಮೌಲ್ಯ ಕುಸಿಯಲು ಪ್ರಮುಖ ಕಾರಣ ಎಂದು ಇಲ್ಲಿನ ವಿದೇಶಿ ವಿನಿಮಯ ಕೇಂದ್ರದ ಮೂಲಗಳು ತಿಳಿಸಿವೆ. ಜ. 9ರಂದು ರೂಮೌಲ್ಯ 52.15ಕ್ಕೆ ಇಳಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.