ಲಂಡನ್(ಪಿಟಿಐ): ಭಯೋತ್ಪಾದಕ ಸಂಘಟನೆಗಳಿಗೆ ಹಣ ವರ್ಗಾವಣೆ, ಅಕ್ರಮ ಹಣ ಸಕ್ರಮಗೊಳಿಸುವ ಮೂಲಕ ಅಮೆರಿಕದ ಕಾನೂನು ಉಲ್ಲಂಘಿಸಿದ ಆರೋಪಕ್ಕೊಳಗಾಗಿರುವ ಬ್ಯಾಂಕಿಂಗ್ ದಿಗ್ಗಜ `ಎಚ್ಎಸ್ಬಿಸಿ', ಈಗ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಭಾರಿ ದಂಡ ತೆರಲು ಮುಂದಾಗಿದೆ.
ಲಂಡನ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಚ್ಎಸ್ಬಿಸಿ, ಭಯೋತ್ಪಾದಕ ಸಂಘಟನೆಗಳಿಗೆ ಹಣ ವರ್ಗಾವಣೆ, ಅಕ್ರಮ ಹಣ ಸಕ್ರಮ ಮತ್ತು ಮಾದಕವಸ್ತು ಚಟುವಟಿಕೆಗೆ ಹಣ ವರ್ಗಾವಣೆಗೆ ನೆರವು ನೀಡಿದೆ. ಆ ಮೂಲಕ ಇಲ್ಲಿನ ಹಣಕಾಸು ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ವಂಚಿಸಿದೆ ಎಂದು ಅಮೆರಿಕದ ಸಂಸತ್ ಆರೋಪಿಸಿದ್ದಿತು.
ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರಕ್ಕೆ 192 ಕೋಟಿ ಡಾಲರ್(ರೂ10464 ಕೋಟಿ) ದಂಡ ಪಾವತಿಸುವುದಾಗಿ ಎಚ್ಎಸ್ಬಿಸಿ ಪ್ರಕಟಿಸಿದೆ. ಆ ಮೂಲಕ, ಅಕ್ರಮ ಚಟುವಟಿಕೆಗಳಿಗೆ ನೆರವು ಪ್ರಕರಣದಿಂದ ಹೊರಬರಲು `ದಂಡ ಪಾವತಿ' ಪರಿಹಾರ ಸೂತ್ರ ಮಂಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.