ADVERTISEMENT

ರೂ24 ಸಾವಿರ ಕೋಟಿ ಮರು ಪಾವತಿಸಿ

ಸಹಾರಾ ಸಮೂಹಕ್ಕೆ ಸುಪ್ರೀಂಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 19:39 IST
Last Updated 5 ಡಿಸೆಂಬರ್ 2012, 19:39 IST

ನವದೆಹಲಿ (ಪಿಟಿಐ): ಹೂಡಿಕೆದಾರರಿಂದ ಸಂಗ್ರಹಿಸಿದ ರೂ 24 ಸಾವಿರ ಕೋಟಿ  ಹಣವನ್ನು ಶೇ 15ರಷ್ಟು ಬಡ್ಡಿ ಸೇರಿಸಿ, 9 ವಾರಗಳ ಒಳಗೆ ಎರಡು ಕಂತುಗಳಲ್ಲಿ ಮರು ಪಾವತಿಸುವಂತೆ ಸಹಾರಾ ಸಮೂಹದ ಎರಡು ಕಂಪೆನಿಗಳಿಗೆ ಸುಪ್ರೀಂ  ಕೋರ್ಟ್ ಬುಧವಾರ ಆದೇಶಿಸಿದೆ.

ಹಣ ಮರು ಪಾವತಿಸಲು ಸಮಯ ವಿಸ್ತರಿಸಬೇಕೆಂದು  ಕೋರಿ ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್‌ಲಿ. (ಎಸ್‌ಐಆರ್‌ಇಸಿಎಲ್) ಮತ್ತು ಸಹಾರಾ ಹೌಸಿಂಗ್ ಇನ್ವೆಸ್ಟ್‌ಮೆಂಟ್  ಕಾರ್ಪೊರೇಷನ್ ಲಿ. ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ.  

ಸಹಾರಾ ಸಮೂಹ ತಕ್ಷಣವೇ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ)ರೂ5,120 ಕೋಟಿ ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ) ಹಸ್ತಾಂತರಿಸಬೇಕು. ಇನ್ನುಳಿದ ಹಣವನ್ನು ಎರಡು ಕಂತುಗಳಾಗಿ ಠೇವಣಿ ಇರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರನ್ನೊಳಗೊಂಡ ಪೀಠ ಸೂಚಿಸಿದೆ.

ಹೂಡಿಕೆದಾರರಿಗೆ 2013ರ ಜನವರಿ ಮೊದಲ ವಾರದೊಳಗೆ ಮೊದಲ ಕಂತಿನಲ್ಲಿ ರೂಪದಲ್ಲಿ ್ಙ10 ಸಾವಿರ ಪಾವತಿಸಬೇಕು. ಎರಡನೆಯ ಕಂತನ್ನು ಫೆಬ್ರುವರಿ ಮೊದಲ ವಾರದೊಳಗೆ ಪಾವತಿಸಬೇಕು ಎಂದು ಪೀಠ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸಹಾರಾ ಸಮೂಹದ ವಾದ ಆಲಿಸದೆ ಸುಪ್ರೀಂ ಕೋ   ರ್ಟ್ ಈ ತೀರ್ಪು ನೀಡಿದೆ ಎಂದು ಹೂಡಿಕೆದಾರರ ಸಂಘಟನೆಗಳು ಪ್ರತಿಕ್ರಿಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.