ADVERTISEMENT

ವರ್ಷಾಂತ್ಯದವರೆಗೆ ಬಿಗಿ ವಿತ್ತೀಯ ನೀತಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಹಣದುಬ್ಬರ ಗರಿಷ್ಠ ಮಟ್ಟದಲ್ಲಿಯೇ ಮುಂದುವರೆದಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಈ ವರ್ಷಾಂತ್ಯದವರೆಗೆ ತನ್ನ ಬಿಗಿ ವಿತ್ತೀಯ ನೀತಿಯನ್ನು ಮುಂದುವರೆಸುವ ಸಾಧ್ಯತೆ ಇದೆ ಎಂದು ಜಾಗತಿಕ ಬ್ಯಾಂಕಿಂಗ್ ಮುಂಚೂಣಿ  ಸಂಸ್ಥೆ `ಸ್ಟ್ಯಾಂಡರ್ಡ್ ಅಂಡ್ ಚಾರ್ಟರ್ಡ್~ ಹೇಳಿದೆ.

`ಆರ್‌ಬಿಐ~ ಸೆಪ್ಟೆಂಬರ್ 16ರಂದು ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ಹೆಚ್ಚಿಸಿದೆ. ಮಾರ್ಚ್ 2010ರಿಂದ ಇದು 12ನೇ ಬಡ್ಡಿ ದರ ಏರಿಕೆಯಾಗಿದೆ. ಪರಿಷ್ಕೃತ ದರದಂತೆ ರೆಪೊ ದರ ಶೇ 8.25 ಮತ್ತು ರಿವ  ರ್ಸ್ ರೆಪೊ ದರ ಶೇ 7.25ರಷ್ಟಾಗಿದೆ. ಹಣದುಬ್ಬರ ದರ ಹಿತಕರ ಮಟ್ಟವಾದ ಶೇ 5-6ರ ತನಕ ಇಳಿಯುವವರೆಗೆ  `ಆರ್‌ಬಿಐ~ ಇದೇ ರೀತಿಯ ಆಕ್ರಮಣಕಾರಿಯಾದ ವಿತ್ತೀಯ ನೀತಿ ಅನುಸರಿಸಲಿದೆ ಎಂದು `ಸ್ಟ್ಯಾಂಡರ್ಡ್ ಅಂಡ್ ಚಾಟರ್ಡ್~ ಅಭಿಪ್ರಾಯಪಟ್ಟಿದೆ.

ಆಗಸ್ಟ್ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ದರ 9.78ರಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.