ಬೆಂಗಳೂರು: ವಾಣಿಜ್ಯ ಬಳಕೆ ವಾಹನಗಳ ಖರೀದಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವುದಕ್ಕೆ ಸಂಬಂಧಿಸಿದಂತೆ ‘ಟಿವಿಎಸ್ ಸಮೂಹ’ದ ಜತೆಗೆ ‘ಯುಕೊ ಬ್ಯಾಂಕ್’ ಒಪ್ಪಂದ ಮಾಡಿ ಕೊಂಡಿದೆ.
ವಾಣಿಜ್ಯ ಬಳಕೆ ವಾಹನಗಳಿಗೆ ದೊಡ್ಡ ಮೊತ್ತದ ಸಾಲ ವಿತರಿಸಲು ಯೋಜಿಸಲಾಗಿದೆ. ಗರಿಷ್ಠ ₨1 ಕೋಟಿವರೆಗೂ ಸಾಲ ನೀಡಲಾಗುವುದು ಎಂದು ಯುಕೊ ಬ್ಯಾಂಕ್ ವಲಯ ವ್ಯವಸ್ಥಾಪಕ ಎಸ್.ವೈದ್ಯನಾಥನ್ ವಿವರಿಸಿದರು.
ವಾಣಿಜ್ಯ ಬಳಕೆ ವಾಹನಗಳ ಸಾಲ ವಿತರಣೆ ಕಾರ್ಯಕ್ರಮಕ್ಕೆ ಇಲ್ಲಿ ಚಾಲನೆ ನೀಡಿದ ಅವರು, 84 ತಿಂಗಳುಗಳ ಅವಧಿಗೆ ಸಾಲ ಲಭ್ಯವಿದೆ. ಶೇ 15ರಷ್ಟು ಬಡ್ಡಿದರ ಇರಲಿದೆ ಎಂದರು. ಕಾರ್ಯಕ್ರಮದಲ್ಲಿ 100 ಗ್ರಾಹಕರಿಗೆ ವಾಹನ ಸಾಲ ಮಂಜೂರು ಮಾಡಲಾ ಯಿತು.