ADVERTISEMENT

ವ್ಯಾಪಾರ ಕೊರತೆ ಹೆಚ್ಚಳ ಸಾಧ್ಯತೆ

ಪಿಟಿಐ
Published 10 ಮೇ 2018, 19:30 IST
Last Updated 10 ಮೇ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಮುಂಬೈ: ಡಾಲರ್‌ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಇಳಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ವ್ಯಾಪಾರ ಕೊರತೆಯು ನಾಲ್ಕು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಸಂಸ್ಥೆ ಹೇಳಿದೆ.

ವ್ಯಾಪಾರ ಕೊರತೆಯು ಜಿಡಿಪಿಯ ಶೇ 6.4ಕ್ಕೆ, ಮೌಲ್ಯದ ಲೆಕ್ಕದಲ್ಲಿ ₹ 11.92 ಲಕ್ಷ ಕೋಟಿಗೆ ತಲುಪಲಿದೆ ಎಂದು ತಿಳಿಸಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಶೇ 5 ರಷ್ಟು ಕುಸಿತ ಕಂಡು ₹ 67ರ ಗಡಿ ದಾಟಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆ ಈ ಅಂದಾಜು ಮಾಡಿದೆ.

ADVERTISEMENT

2017–18ನೇ ಹಣಕಾಸು ವರ್ಷದಲ್ಲಿ ವ್ಯಾಪಾರ ಕೊರತೆಯು ಜಿಡಿಪಿಯ ಶೇ 6 ರಷ್ಟಿತ್ತು. ಮೌಲ್ಯದ ಲೆಕ್ಕದಲ್ಲಿ ₹ 10.50 ಲಕ್ಷ ಕೋಟಿಗಳಷ್ಟಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿನ ಏರಿಕೆ ಮತ್ತು ಚಿನ್ನದ ಆಮದು  ಕಾರಣಕ್ಕೆ ಈ ಪರಿಸ್ಥಿತಿ ಉದ್ಭವಿಸಲಿದೆ.

2012–13ನೇ ಹಣಕಾಸು ವರ್ಷದಲ್ಲಿ ಜಿಡಿಪಿಯಲ್ಲಿ ದೇಶಿ ವ್ಯಾಪಾರದ ಕೊಡುಗೆ ಶೇ 55.8 ರಷ್ಟಿತ್ತು. ಇದು 2017–18ರಲ್ಲಿ ಶೇ 40.6ಕ್ಕೆ ಇಳಿಕೆಯಾಗಿದೆ ಎಂದು ಹೇಳಿದೆ.

ಕೆಲವು ದೇಶಗಳು ಅನುಸರಿಸುತ್ತಿರುವ ರಕ್ಷಣಾತ್ಮಕ ನೀತಿಯಿಂದ ದೇಶದ ರಫ್ತು ವಹಿವಾಟು ಮಂದಗತಿಯ ಬೆಳವಣಿಗೆ ಕಾಣುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.