ADVERTISEMENT

ಶಿಕ್ಷಕನಿಗೆ ಥಳಿತ: ವಿದ್ಯಾರ್ಥಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 19:30 IST
Last Updated 2 ಡಿಸೆಂಬರ್ 2013, 19:30 IST

ಲಾಹೋರ್‌ (ಪಿಟಿಐ): ಶಿಕ್ಷಕನಿಗೆ ಥಳಿಸಿದ ಜಮಾತ್-–ಎ ಇಸ್ಲಾಮಿ ವಿದ್ಯಾರ್ಥಿ ಸಂಘಟನೆಯ 20 ವಿದ್ಯಾರ್ಥಿಗಳನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್‌ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಶಿಕ್ಷಕ ನಯೀಮುಲ್ಲಾ ಖಾನ್‌ ಅವರನ್ನು ವಿದ್ಯಾರ್ಥಿಗಳು ಥಳಿಸಿದ್ದರು.  ಈ ಸಂಬಂಧ ಪೊಲೀಸರು ವಿವಿಯ ಹಾಸ್ಟೆಲ್‌­ನಿಂದ ವಿದ್ಯಾರ್ಥಿಗಳನ್ನು ಸೋಮವಾರ ವಶಕ್ಕೆ ಪಡೆದಿದ್ದಾರೆ ಎಂದು ವಿ.ವಿ ಶಿಕ್ಷಕರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.