ADVERTISEMENT

ಶೀಘ್ರ ಬೋಯಿಂಗ್ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST

ಬೆಂಗಳೂರು:  ‘ಬೋಯಿಂಗ್ 787’ ವಿಮಾನಗಳನ್ನು ಭಾರತಕ್ಕೆ ಈ ವರ್ಷದ ಅಕ್ಟೋಬರ್ ತಿಂಗಳ ನಂತರ ಹಸ್ತಾಂತರ ಮಾಡಲಾಗುವುದು ಎಂದು ಬೋಯಿಂಗ್ ವಿಮಾನ ತಯಾರಿಕಾ ಸಂಸ್ಥೆಯ ಭಾರತೀಯ ವಿಭಾಗದ ಮುಖ್ಯಸ್ಥ ದಿನೇಶ್ ಕೇಸ್ಕರ್ ಅವರು ತಿಳಿಸಿದರು.

ಏರೋ ಇಂಡಿಯಾ-2011 ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ಕ್ಷೇತ್ರಗಳಲ್ಲಿ ಭಾರತೀಯ ವೈಮಾನಿಕ ಕ್ಷೇತ್ರವೂ ಒಂದು. ಈ ಕ್ಷೇತ್ರದ ಬೆಳವಣಿಗೆಯಲ್ಲಿ ಬೋಯಿಂಗ್ ಸಂಸ್ಥೆ ಕೂಡ ಭಾಗಿಯಾಗಲಿದೆ’ ಎಂದರು.

‘2010ರ ಅಂತ್ಯದ ವೇಳೆಗೆ ವಿವಿಧ ದೇಶಗಳಿಂದ ಒಟ್ಟು 847 ‘ಬೋಯಿಂಗ್ 787’ ಮಾದರಿಯ ವಿಮಾನಗಳಿಗೆ ಬೇಡಿಕೆ ಬಂದಿತ್ತು. ಭಾರತದ ನಾಗರಿಕ ವಿಮಾನಯಾನ ಮಾರುಕಟ್ಟೆ ಮತ್ತು ರಕ್ಷಣಾ ಮಾರುಕಟ್ಟೆಯಲ್ಲೂ ಬೋಯಿಂಗ್ ಸಂಸ್ಥೆ ತನ್ನ ನೆಲೆಯನ್ನು ವಿಸ್ತರಿಸುತ್ತಿದೆ’ ಎಂದರು.ಭಾರತದ ನಾಗರಿಕ ವಿಮಾನಯಾನ ಮಾರುಕಟ್ಟೆ ವರ್ಷಕ್ಕೆ ಶೇ 15ರಷ್ಟು ಬೆಳವಣಿಗೆ ಕಾಣುತ್ತಿದೆ. ತೈಲ ಬೆಲೆ ಮತ್ತು ಹಣದುಬ್ಬರ ದರ ನಿಯಂತ್ರಣದಲ್ಲಿದ್ದರೆ ಭಾರತದ ನಾಗರಿಕ ವಿಮಾನಯಾನ ಮಾರುಕಟ್ಟೆ ಖಂಡಿತವಾಗಿಯೂ ಇನ್ನಷ್ಟು ಶಕ್ತವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.