ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿಯು (ಜಿಡಿಪಿ) ಶೇ 6ರಿಂದ ಶೇ 6.5ರಷ್ಟು ಇರಲಿದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಅಂದಾಜು ಮಾಡಿದೆ.
2012-13ನೇ ಸಾಲಿನಲ್ಲಿ `ಜಿಡಿಪಿ' ದಶಕದ ಹಿಂದಿನ ಮಟ್ಟವಾದ ಶೇ 5ಕ್ಕೆ ಜಾರಿದೆ. ಆದರೆ, ಸರ್ಕಾರ ಇತ್ತೀಚೆಗೆ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳಿಂದ ಬಂಡವಾಳ ಹರಿವು ಹೆಚ್ಚಿದೆ. ಹಣದುಬ್ಬರ ತಗ್ಗಿರುವುದರಿಂದ ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಹೆಚ್ಚಿದೆ. ಈ ಎಲ್ಲ ಸಕಾರಾತ್ಮಕ ಅಂಶಗಳಿಂದ `ಜಿಡಿಪಿ' ಗಣನೀಯ ಚೇತರಿಕೆ ಕಾಣಲಿದೆ ಎಂದು `ಸಿಐಐ'ನ ಉದ್ಯಮ ಮುನ್ನೋಟ ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.