ADVERTISEMENT

ಷೇರು ಮರುಖರೀದಿ ನಿಯಮ ಸರಳಗೊಳಿಸಲು ಸೆಬಿ ಕ್ರಮ

ಪಿಟಿಐ
Published 17 ಜೂನ್ 2018, 18:56 IST
Last Updated 17 ಜೂನ್ 2018, 18:56 IST
ಷೇರು ಮರುಖರೀದಿ ನಿಯಮ ಸರಳಗೊಳಿಸಲು ಸೆಬಿ ಕ್ರಮ
ಷೇರು ಮರುಖರೀದಿ ನಿಯಮ ಸರಳಗೊಳಿಸಲು ಸೆಬಿ ಕ್ರಮ   

ನವದೆಹಲಿ: ಷೇರು ಮರುಖರೀದಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮುಂದಾಗಿದೆ.

ಮರುಖರೀದಿಯನ್ನು ಸಾರ್ವಜನಿಕವಾಗಿ ಘೋಷಣೆ ಮಾಡುವುದನ್ನೂ ಒಳಗೊಂಡು ಹಲವು ವಿಷಯಗಳಲ್ಲಿ ಇನ್ನಷ್ಟು ಸ್ಪಷ್ಟನೆ ತರುವ ಉದ್ದೇಶದಿಂದ ಷೇರು ಮರುಖರೀದಿಯ ನಿಮಯಗಳಲ್ಲಿ ಕೆಲವು ಬದಲಾವಣೆ ತರಲು ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಇರುವ ನಿಯಮಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. 2014 ಏಪ್ರಿಲ್‌ನಿಂದ ಜಾರಿಗೆ ಬಂದಿರುವ ಕಂಪನಿ ಕಾಯ್ದೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಬದಲಾವಣೆಗಳನ್ನು ತಲಾಗುವುದು.

ADVERTISEMENT

ಹೊಸ ನಿಯಮಗಳ ಬಗ್ಗೆ 150ಕ್ಕೂ ಹೆಚ್ಚಿನ ಸಂಸ್ಥೆಗಳು ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಿವೆ. ಜೂನ್‌ 21 ರಂದು ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ಎಲ್ಲಾ ಅಂಶಗಳನ್ನೂ ಪರಿಗಣಿಸಿ, ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರು ಷೇರು ಮರುಖರೀದಿಗೆ ಅಧಿಕೃತ ಒಪ್ಪಿಗೆ ನೀಡುವ  ಮತ್ತು ಷೇರು ಮರುಖರೀದಿ ಮಾಡಿದವರಿಗೆ ಅದರ ಮೊತ್ತ ಪಾವತಿಸುವ ಅವಧಿಯು ‘ಮರುಖರೀದಿ ಅವಧಿ’ಯಾಗಿರುತ್ತದೆ ಎಂದು ಅವರು ವಿವರಿಸಿದ್ದಾರೆ.

ಷೇರು ಮರುಖರೀದಿ ಘೋಷಣೆ ಮಾಡಿದ ನಂತರ ಆ ಬಗ್ಗೆ ಎರಡು ದಿನಗಳ ಕೆಲಸದ ಅವಧಿಯೊಳಗೆ ಸಾರ್ವಜನಿಕವಾಗಿ ಮಾಹಿತಿ ನೀಡಬೇಕು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.