ADVERTISEMENT

ಸಂಪೂರ್ಣ ವಿಮಾ ಗ್ರಾಮ ಯೋಜನೆಗೆ ಚಾಲನೆ

ಪಿಟಿಐ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
ಮನೋಜ್‌ ಸಿನ್ಹಾ
ಮನೋಜ್‌ ಸಿನ್ಹಾ   

ನವದೆಹಲಿ: ಗ್ರಾಮದ ಪ್ರತಿಯೊಂದು ಮನೆಗಳ ಒಬ್ಬರ ಹೆಸರಲ್ಲಿ ಗ್ರಾಮೀಣ ಅಂಚೆ ಜೀವ ವಿಮೆ ಮಾಡಿಸಿ ಗ್ರಾಮಗಳನ್ನು ಸಂಪೂರ್ಣ ವಿಮಾ ಗ್ರಾಮವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿದ ಸಂಪೂರ್ಣ ವಿಮಾ ಗ್ರಾಮ (ಎಸ್‌ಬಿಜಿ) ಯೋಜನೆಗೆ ಶುಕ್ರವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕೇಂದ್ರ ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ಯೋಜನೆಗೆ ಚಾಲನೆ ನೀಡಿದರು. ‘ಈ ಮೊದಲು ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಅಂಚೆ ಜೀವ ವಿಮೆ ಯೋಜನೆಯ ಲಾಭವನ್ನು ಇನ್ನು ಮುಂದೆ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಲೆಕ್ಕ ಪರಿಶೋಧಕರಂತಹ ಖಾಸಗಿ ಉದ್ಯೋಗಿಗಳೂ ಪಡೆಯಬಹುದು’ ಎಂದು ತಿಳಿಸಿದರು.

ಎಪಿವೈ ಚಂದಾದಾರರು: 2018ರ ಮಾರ್ಚ್‌ ಒಳಗೆ ಅಟಲ್‌ ಪಿಂಚಣಿ ಯೋಜನೆಯ (ಎಪಿವೈ) ಚಂದಾದಾರರ ಸಂಖ್ಯೆಯು  1 ಕೋಟಿಗೆ ತಲುಪಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ADVERTISEMENT

ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಚಂದಾದಾರರ ಸಂಖ್ಯೆ 13 ಕೋಟಿಗೆ ತಲುಪಿದೆ. ಇದಕ್ಕೆ ಹೋಲಿಸಿದರೆ ಅಟಲ್ ಪಿಂಚಣಿ ಯೋಜನೆಗೆ ಹಿನ್ನಡೆಯಾಗಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.