ಮುಂಬೈ: `ಸಂಸ್ಕೃತಿ ಮುಖಿ~ ಕೃತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಚಿತ್ರಣ ಒಳಗೊಂಡಿದೆ. ಸಾಧಕರ ಅಭಿಪ್ರಾಯ, ಎದುರಿಸಿದ ಸವಾಲು, ಸಾಧನೆ, ಚಿಂತನೆ ವಿಚಾರವೂ ಇದರಲ್ಲಿದೆ ಎಂದು ಲೇಖಕ ಓಂದಾಸ್ ಕಣ್ಣಂಗಾರ್ ಅವರ ಸಂದರ್ಶನ ಲೇಖನಗಳ ಸಂಕಲನವನ್ನು ಇಲ್ಲಿ ಬಿಡುಗಡೆ ಮಾಡಿದ ಮಹಾರಾಷ್ಟ್ರ ಸತಾರ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಎಂ.ಪ್ರಸನ್ನ ಹೇಳಿದರು.
ಕರ್ನಾಟಕ ಸಂಘ ಮತ್ತು ಅಭಿಜಿತ್ ಪ್ರಕಾಶನ ಸಂಯುಕ್ತವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ `ಸಂಸ್ಕೃತಿ ಮುಖಿ~ ಕೃತಿ ಬಿಡುಗಡೆ ಮಾಡಲಾಯಿತು. ಕಣ್ಣಂಗಾರ್ ಅವರು ಮುಂಬೈಯ ಸಾಂಘಿಕ, ಸಾಂಸ್ಕೃತಿಕ, ಸಾಹಿತ್ಯ ವಲಯದಲ್ಲಿ ತೊಡಗಿಸಿಕೊಂಡವರು ಎಂದು ಅತಿಥಿ ಸುರೇಶ್ ಶೆಟ್ಟಿ ಬಳ್ಳಾರಿ ಹೇಳಿದರು.
`ಪ್ರಸಕ್ತ ಕಾಲದಲ್ಲಿ ಸಮಗ್ರವಾದ ಓದು ಸಾಧ್ಯವಿಲ್ಲ. ಜನರು ಸಂತೋಷದಿಂದ ದೂರವಾಗಿ ಹಣದ ಕುರಿತೇ ಚಿಂಸಿಸುತ್ತಾ ಜೀವನ ಸಾಗಿಸುತ್ತಿರುವುದು ಖೇದಕರ~ ಎಂದು ಅಭಿಜಿತ್ ಪ್ರಕಾಶನದ ಜಿ.ಎನ್.ಉಪಾಧ್ಯ ವಿಷಾದಿಸಿದರು.
ಕರ್ನಾಟಕ ಸಂಘ ಅಧ್ಯಕ್ಷ ಡಾ. ಜಿ.ಡಿ.ಜೋಶಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಹರೀಶ್ ಹೆಜ್ಮಾಡಿ ಕೃತಿ ಕುರಿತು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.