ADVERTISEMENT

ಸಗಟು ಹಣದುಬ್ಬರ 7 ತಿಂಗಳ ಕನಿಷ್ಠ

ಪಿಟಿಐ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ಸಗಟು ಹಣದುಬ್ಬರ 7 ತಿಂಗಳ ಕನಿಷ್ಠ
ಸಗಟು ಹಣದುಬ್ಬರ 7 ತಿಂಗಳ ಕನಿಷ್ಠ   

ನವದೆಹಲಿ : ತರಕಾರಿ, ಆಹಾರ ಪದಾರ್ಥಗಳು ಅಗ್ಗವಾಗಿರುವುದರಿಂದ ಸಗಟು ದರ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ 2.48ಕ್ಕೆ ಇಳಿಕೆಯಾಗಿದೆ.

ಇದು 7 ತಿಂಗಳ ಕನಿಷ್ಠ ಮಟ್ಟವಾಗಿದೆ. ಈ ಹಿಂದೆ ಜುಲೈನಲ್ಲಿ ಶೇ 1.88 ರಷ್ಟು ಕನಿಷ್ಠ ಮಟ್ಟದಲ್ಲಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.

ಸಗಟು ದರ ಸೂಚ್ಯಂಕದ (ಡಬ್ಲ್ಯುಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಹಣದುಬ್ಬರವು 2017ರ ಫೆಬ್ರುವರಿಯಲ್ಲಿ ಶೇ 5.51 ರಷ್ಟಿತ್ತು.

ADVERTISEMENT

ಆಹಾರ ಪದಾರ್ಥಗಳ ಹಣದುಬ್ಬರ ಶೇ 0.88ಕ್ಕೆ ತಗ್ಗಿದೆ. ತರಕಾರಿಗಳ ಬೆಲೆ ಶೇ 40.77 ರಿಂದ ಶೇ 15.26ಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.