ADVERTISEMENT

ಸಿಎನ್‌ಜಿ ತುಟ್ಟಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 19:30 IST
Last Updated 4 ಜೂನ್ 2011, 19:30 IST

ನವದೆಹಲಿ (ಪಿಟಿಐ): ಪೆಟ್ರೋಲ್ ದರ ಏರಿಕೆಯ ಬೆನ್ನ ಹಿಂದೆಯೇ ನವದೆಹಲಿಯಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ದರವೂ ಪ್ರತಿ ಕೆ.ಜಿಗೆ ರೂ 0.50ರಷ್ಟು ಏರಿಕೆಯಾಗಿದೆ.

ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) `ಸಿಎನ್‌ಜಿ~ ದರವನ್ನು ್ಙ0.50ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದರದಂತೆ ಪ್ರತಿ ಕೆ.ಜಿ ಸಿಎನ್‌ಜಿಗೆ ನವದೆಹಲಿಯಲ್ಲಿ ್ಙ29.80 ಮತ್ತು ನೊಯಿಡಾ,ಗಾಜಿಯಾಬಾದ್‌ನಲ್ಲಿ ್ಙ 33.40 ರಷ್ಟಾಗಲಿದೆ.

ಕಳೆದ ಏಪ್ರಿಲ್‌ನಲ್ಲಿ `ಸಿಎನ್‌ಜಿ~ ದರ  ್ಙ0.30ರಷ್ಟು ತುಟ್ಟಿಯಾಗಿತ್ತು. ಸದ್ಯ `ಎಲ್‌ಎನ್‌ಜಿ~ ದುಬಾರಿಯಾಗಿರುವುದರಿಂದ `ಸಿಎನ್‌ಜಿ~ ದರ ಮತ್ತೆ ಏರಿಕೆಯಾಗಿದೆ ಎಂದು `ಐಜಿಎಲ್~ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.