ADVERTISEMENT

ಸೂಚ್ಯಂಕ ಕುಸಿತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಮುಂಬೈ (ಪಿಟಿಐ): ಆಹಾರ ಹಣದುಬ್ಬರ ಏರಿಕೆ ಮತ್ತು `ಆರ್‌ಬಿಐ~ನ ಬಡ್ಡಿ ದರ ಹೆಚ್ಚಳ ಭೀತಿಯಿಂದ ಶುಕ್ರವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 151 ಅಂಶಗಳಷ್ಟು  ಕುಸಿತ ದಾಖಲಿಸಿತು.

ಭಾರತೀಯ ರಿಸರ್ವ್ ಬ್ಯಾಂಕ್ ಅಕ್ಟೋಬರ್ 25ರಂದು ಎರಡನೆಯ ತ್ರೈಮಾಸಿಕದ ಹಣಕಾಸು ನೀತಿಯ ಪರಾಮರ್ಶೆ ಪ್ರಕಟಿಸಲಿದೆ.  ಈ ಹಿನ್ನೆಲೆಯಲ್ಲಿ ಷೇರುಗಳ ಖರೀದಿ ಮತ್ತು ಮಾರಾಟದಲ್ಲಿ ಹೆಚ್ಚಿನ ಒತ್ತಡ ಕಂಡುಬಂತು.

ದಿನದ ವಹಿವಾಟಿನಲ್ಲಿ ಗ್ರಾಹಕ ಉತ್ಪನ್ನ ಕಂಪೆನಿಗಳು ಮುನ್ನಡೆ ಸಾಧಿಸಿದರೆ, ರಿಯಾಲ್ಟಿ, ಲೋಹ ಕಂಪೆನಿಗಳು ನಷ್ಟಕ್ಕೊಳಗಾದವು. ಎಲ್ ಅಂಡ್‌ಟಿ ಷೇರು  ಶೇ 3.54ರಷ್ಟು ಹಾನಿಗೊಳಗಾಯಿತು. ದಿನದಂತ್ಯದಲ್ಲಿ 16,785 ಅಂಶಗಳಿಗೆ ಸೂಚ್ಯಂಕ ವಾರಾಂತ್ಯದ ವಹಿವಾಟು ಕೊನೆಗೊಳಿಸಿತು.ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ 42 ಅಂಶಗಳನ್ನು ಕಳೆದುಕೊಂಡು 5,049 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.