ADVERTISEMENT

ಸೂಚ್ಯಂಕ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಹೊಸ ವರ್ಷದ ಮೊದಲ ದಿನದ  ವಹಿವಾಟಿನಲ್ಲಿ 63 ಅಂಶಗಳಷ್ಟು ಏರಿಕೆ ದಾಖಲಿಸಿತು.

ಹಿಂದಿನ ನಾಲ್ಕು ಸತತ ವಹಿವಾಟು ದಿನಗಳಲ್ಲಿ ಕುಸಿತ ಕಂಡಿದ್ದ ಸೂಚ್ಯಂಕವು ಸೋಮವಾರ ಚೇತರಿಕೆ ಕಂಡು 15,517.92 ಅಂಶಗಳೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ.

ಅರ್ಹ ವಿದೇಶಿ ಹೂಡಿಕೆದಾರರು (ಕ್ಯುಎಫ್‌ಐ) ಷೇರುಪೇಟೆಯಲ್ಲಿ  ನೇರವಾಗಿ ಬಂಡವಾಳ ತೊಡಗಿಸಲು ಅನುಮತಿ ನೀಡಿರುವ ಸಕಾರಾತ್ಮಕ ನಿರ್ಧಾರವೂ ವಹಿವಾಟಿನ ಮೇಲೆ ಗಮನಾರ್ಹ ಪರಿಣಾಮ ಬೀರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.