ADVERTISEMENT

ಸೂಚ್ಯಂಕ 1 ತಿಂಗಳ ಗರಿಷ್ಠ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 19:30 IST
Last Updated 2 ಡಿಸೆಂಬರ್ 2013, 19:30 IST

ಮುಂಬೈ (ಪಿಟಿಐ): ಮುಂಬೈ ಷೇರು­ಪೇಟೆ ಸಂವೇದಿ ಸೂಚ್ಯಂಕ ಸೋಮವಾ­ರದ ವಹಿವಾ­ಟಿನಲ್ಲಿ 106 ಅಂಶಗಳಷ್ಟು ಚೇತರಿಕೆ ಕಂಡಿದ್ದು ಕಳೆದ ಒಂದು ತಿಂಗಳಲ್ಲೇ ಗರಿಷ್ಠ ಮಟ್ಟವಾದ 20,898 ಅಂಶಗಳನ್ನು ತಲುಪಿದೆ.

ನವೆಂಬರ್‌ 5ರ ನಂತರ ದಾಖ­ಲಾಗಿರುವ ಗರಿಷ್ಠ ಏರಿಕೆ ಇದಾಗಿದೆ. ಪ್ರಸಕ್ತ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ‘ಜಿಡಿಪಿ’ ನಿರೀಕ್ಷೆಗೂ ಮೀರಿ ಶೇ 4.8ಕ್ಕೆ ಏರಿಕೆ ಕಂಡಿರುವುದು ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿದೆ. ಕಳೆದ ಮೂರು ವಹಿವಾಟು ಅವಧಿಗಳಲ್ಲಿ ಸೂಚ್ಯಂಕ ಒಟ್ಟಾರೆ 477 ಅಂಶಗಳಷ್ಟು ಏರಿಕೆ ದಾಖಲಿಸಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ ಕೂಡ 41 ಅಂಶಗಳಷ್ಟು ಏರಿಕೆ ಪಡೆದು 6,217 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ಆರೋಗ್ಯ ಮತ್ತು ಭಾರಿ ಯಂತ್ರೋಪಕರಣ ವಲಯಗಳ ಷೇರುಗಳು ಹೆಚ್ಚಿನ ಲಾಭ ಮಾಡಿ­ಕೊಂಡವು.

ರೂಪಾಯಿ ಚೇತರಿಕೆ: ಡಾಲರ್‌ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಸೋಮವಾರದ ವಹಿವಾಟಿನಲ್ಲಿ 13 ಪೈಸೆಗಳಷ್ಟು ಚೇತರಿಕೆ ಕಂಡಿದ್ದು, ₨62.31­ರಷ್ಟಾಗಿದೆ.  ತೈಲ ಮಾರಾಟ ಕಂಪೆನಿಗಳಿಂದ ಡಾಲರ್‌ ಬೇಡಿಕೆ ತಗ್ಗಿರುವುದು  ರೂಪಾಯಿ ಮೌಲ್ಯವರ್ಧನೆಗೆ ಪ್ರಮುಖ ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.