ADVERTISEMENT

ಸೂಚ್ಯಂಕ: 212 ಅಂಶ ಕುಸಿತ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಸೆನ್ಸೆಕ್ಸ್) ಶುಕ್ರವಾರದ ವಹಿವಾಟಿನಲ್ಲಿ 212 ಅಂಶಗಳನ್ನು ಕಳೆದುಕೊಂಡು 19242 ಅಂಶಗಳಿಗೆ ಕುಸಿಯಿತು. ಕಳೆದ ಎರಡು ತಿಂಗಳಲ್ಲಿಯೇ ಇದು ಗರಿಷ್ಠ ಮಟ್ಟದ ಕುಸಿತವಾಗಿದೆ.  ಅ. 8ರಂದು `ಸೆನ್ಸೆಕ್ಸ್' 229.48 ಅಂಶಗಳ ಇಳಿಕೆ ಕಂಡಿತ್ತು.

ಅಮೆರಿಕ ಬಜೆಟ್‌ಗೆ ಸಂಬಂಧಿಸಿದ ಸುದ್ದಿಗಳು ಅಂತರರಾಷ್ಟ್ರೀಯ ಷೇರುಪೇಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ. ಇದೇ ಸಂಗತಿಯಿಂದ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಐಸಿಐಸಿಐ ಬ್ಯಾಂಕ್, ಆರ್‌ಐಎಲ್, ಎಸ್‌ಬಿಐ, ಸನ್ ಫಾರ್ಮಾ, ಮಹೀಂದ್ರಾ ಕಂಪೆನಿ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿ ಮೌಲ್ಯ ಕಳೆದುಕೊಂಡವು.

`ಎನ್‌ಡಿಎ' ಸರ್ಕಾರದ ಅವಧಿಯಲ್ಲಿ ನಡೆದ ತರಂಗಾಂತರ ಅಕ್ರಮ ಹಂಚಿಕೆಗೆ ಸಂಬಂಧಿಸಿದಂತೆ ಮೂರು ದೂರವಾಣಿ ಸೇವಾ ಸಂಸ್ಥೆಗಳ ವಿರುದ್ಧ `ಸಿಬಿಐ' ಆರೋಪ ಪಟ್ಟಿ ಸಲ್ಲಿಸಿದೆ. ಏರ್‌ಟೆಲ್ ಕೂಡ ಇದರಲ್ಲಿ ಸೇರಿದ್ದು, ಶುಕ್ರವಾರ ಆ ಕಂಪೆನಿಯ ಷೇರು ಮೌಲ್ಯ ಶೇ 3ರಷ್ಟು ಕುಸಿಯಿತು. ರಿಯಲ್ ಎಸ್ಟೇಟ್, ವಿದ್ಯುತ್, ವಾಹನ ಉದ್ಯಮ, ಬ್ಯಾಂಕಿಂಗ್ ಸೇರಿದಂತೆ ಪ್ರಮುಖ ವಲಯಗಳ ಷೇರುಗಳು ಭಾರಿ ಹಾನಿ ಅನುಭವಿಸಿದವು.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ಯ ಸೂಚ್ಯಂಕ `ನಿಫ್ಟಿ' ಕೂಡ 68.70 ಅಂಶ ಕುಸಿತ ಕಂಡು 5,847.70 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.