ADVERTISEMENT

ಸೂಚ್ಯಂಕ 318 ಅಂಶ ಏರಿಕೆ

ಪಿಟಿಐ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಆರು ವಹಿವಾಟಿನ ದಿನಗಳಲ್ಲಿ ಕುಸಿದಿದ್ದ ಮುಂಬೈ ಷೇರುಪೇಟೆ ಸೂಚ್ಯಂಕವು, ಗುರುವಾರದ ವಹಿವಾಟಿನಲ್ಲಿ 318 ಅಂಶಗಳ ಏರಿಕೆಯೊಂದಿಗೆ 33,351 ಅಂಶಗಳಲ್ಲಿ ಅಂತ್ಯಗೊಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಪರಿಣಾಮಗಳಿಂದ ಷೇರುಗಳ ಮೌಲ್ಯ ಹೆಚ್ಚಾಗಿದ್ದರಿಂದ ಪೇಟೆ ಚೇತರಿಕೆ ಹಾದಿಗೆ ಮರಳಿದೆ. ಜಾಗತಿಕ ವಾಣಿಜ್ಯ ಸಮರದ ಸಾಧ್ಯತೆಯು ಹೆಚ್ಚು ಪ್ರಭಾವ ಬೀರಿಲ್ಲ.

ಕುಸಿತಕ್ಕೆ ಒಳಗಾಗಿದ್ದ ಷೇರುಗಳ ಖರೀದಿಗೆ ವಿದೇಶಿ ಹೂಡಿಕೆದಾರರು ಹೆಚ್ಚು ಆಸಕ್ತಿ ತೋರಿಸಿದ ಪರಿಣಾಮವೂ ಸೂಚ್ಯಂಕ ಏರಿಕೆಗೆ ಕಾರಣವಾಯಿತು.

ADVERTISEMENT

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಷೇರುಗಳ ಖರೀದಿ ಚಟುವಟಿಕೆ ಮಧ್ಯಾಹ್ನದ ನಂತರ ಹೆಚ್ಚಾಗಿದ್ದರಿಂದ ಪೇಟೆಯಲ್ಲಿ ಉತ್ಸಾಹ ಕಂಡುಬಂದಿತು.

ದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಸಾಮಾನ್ಯ ಹೂಡಿಕೆದಾರರು ಖರೀದಿಗೆ ಆಸಕ್ತಿ ತೋರಿಸಿದ್ದರಿಂದ ವಹಿವಾಟಿನ ಒಂದು ಹಂತದಲ್ಲಿ 33,439 ಅಂಶಗಳ ಗರಿಷ್ಠ ಮಟ್ಟಕ್ಕೂ ಸೂಚ್ಯಂಕ ತಲುಪಿತ್ತು.

ಫೆಬ್ರುವರಿ 23ರ ನಂತರ ದಿನದ ವಹಿವಾಟಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಸೂಚ್ಯಂಕ ಏರಿಕೆಯಾಗಿದೆ. ಅಂದು 322 ಅಂಶಗಳಷ್ಟು ಏರಿಕೆಯಾಗಿತ್ತು.

ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 88 ಅಂಶ ಏರಿಕೆಯಾಗಿ 10,242 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು. ವಹಿವಾಟಿನ ಒಂದು ಹಂತದಲ್ಲಿ 10,270 ಅಂಶಗಳ ಗರಿಷ್ಠ ಮಟ್ಟಕ್ಕೂ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.