ADVERTISEMENT

ಸೂರತ್‌ನಲ್ಲಿ ಕ್ಯಾಂಪ್ಕೊ ಮಳಿಗೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 20:12 IST
Last Updated 22 ಮೇ 2018, 20:12 IST
ಗುಜರಾತ್‌ನ ಸೂರತ್‌ನಲ್ಲಿ ಆರಂಭವಾದ ಕ್ಯಾಂಪ್ಕೊ ಮಾರಾಟ ಮಳಿಗೆಯನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ಉದ್ಘಾಟಿಸಿದರು.
ಗುಜರಾತ್‌ನ ಸೂರತ್‌ನಲ್ಲಿ ಆರಂಭವಾದ ಕ್ಯಾಂಪ್ಕೊ ಮಾರಾಟ ಮಳಿಗೆಯನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ಉದ್ಘಾಟಿಸಿದರು.   

ಮಂಗಳೂರು: ಕರ್ನಾಟಕ ಮತ್ತು ಕೇರಳದಲ್ಲಿ ಕೃಷಿಕರು ಬೆಳೆಯುವ ಅಡಿಕೆಗೆ ಉತ್ತರ ಭಾರತದಲ್ಲಿ ಉತ್ತಮ ಬೇಡಿಕೆ ಇದೆ. ಇದೀಗ ಕ್ಯಾಂಪ್ಕೊ ವತಿಯಿಂದ ಗುಜರಾತಿನ ಜನರಿಗೆ ಉತ್ತಮ ಗುಣಮಟ್ಟದ ಚಾಲಿ (ಬಿಳಿ) ಅಡಿಕೆಗೆ ಒದಗಿಸಲಾಗುತ್ತಿದೆ.

ಗುಜರಾತಿನ ಅಹಮದಾಬಾದ್ ಮತ್ತು ರಾಜಕೋಟ್ ನಗರಗಳಲ್ಲಿ ಈಗಾಗಲೇ ಮಾರಾಟ ಕೇಂದ್ರಗಳನ್ನು ಹೊಂದಿರುವ ಕ್ಯಾಂಪ್ಕೊ, ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಗುಜರಾತಿನ ಮೂರನೇ ಮಾರಾಟ ಕೇಂದ್ರವನ್ನು ಸೂರತ್‌ನಲ್ಲಿ ಆರಂಭಿಸಿದೆ.

ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ‘ಗ್ರಾಹಕರ ಸಂತೃಪ್ತಿ ಮತ್ತು ಮಾರುಕಟ್ಟೆ ಬಲವರ್ಧನೆಯಂತಹ ಸಕಾರಾತ್ಮಕ ಸಂಗತಿಗಳಿಂದ ಬೆಳೆಗಾರರ ಹಿತರಕ್ಷಣೆಯಾಗಲಿದೆ’ ಎಂದರು.

ADVERTISEMENT

ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ಸೂರತ್‌ನಲ್ಲಿ ಮಾರಾಟ ಅಭಿವೃದ್ಧಿ ಪ್ರತಿನಿಧಿ ಪಂಕಜ್ ಸಿ. ಕೋಟಕ್, ಸೂರತ್ ಕ್ಯಾಂಪ್ಕೊ ಶಾಖಾಧಿಕಾರಿ ಹರೀಶ್ ಮೂಲ್ಯ, ಅಹಮದಾಬಾದ್ ಶಾಖಾಧಿಕಾರಿ ಪ್ರದೀಪ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.