ADVERTISEMENT

ಸೆಬಿಗೆ ಯು. ಕೆ. ಸಿನ್ಹಾ ನೇಮಕ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 17:40 IST
Last Updated 3 ಫೆಬ್ರುವರಿ 2011, 17:40 IST


ನವದೆಹಲಿ (ಪಿಟಿಐ): ಬಂಡವಾಳ ಮಾರುಕಟ್ಟೆಯ ನಿಯಂತ್ರಣ ಸಂಸ್ಥೆಯಾಗಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ‘ಯುಟಿಐ ಎಎಂಸಿ’ ಮುಖ್ಯಸ್ಥ ಯು. ಕೆ. ಸಿನ್ಹಾ ಅವರನ್ನು ನೇಮಿಸಲಾಗಿದೆ.

ಈ ತಿಂಗಳ 17ರಂದು ಸಿ. ಬಿ. ಭಾವೆ ನಿವೃತ್ತಿಯಾಗಲಿದ್ದಾರೆ.  ಫೆ. 18ರಿಂದ ಜಾರಿಗೆ ಬರುವಂತೆ ಸಿನ್ಹಾ ಅವರ ಅಧಿಕಾರಾವಧಿ 3 ವರ್ಷಗಳದ್ದು ಆಗಿರುತ್ತದೆ.

ಸಿನ್ಹಾ ಅವರು 2002ರಿಂದ 2005ರ ಅವಧಿಯಲ್ಲಿ ಹಣಕಾಸು ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು.
ಸ್ವಾಗತ: ಷೇರುಪೇಟೆ ವಿಶ್ಲೇಷಕರು ಸಿನ್ಹಾ ಅವರ ನೇಮಕಾತಿಯನ್ನು ಸ್ವಾಗತಿಸಿದ್ದು, ಸದ್ಯಕ್ಕೆ ಮಾರುಕಟ್ಟೆಯಲ್ಲಿ ವಹಿವಾಟು ತೀವ್ರ ಏರಿಳಿತ ಕಾಣುತ್ತಿರುವುದರಿಂದ ಈ ಹುದ್ದೆ ನಿಭಾಯಿಸುವುದು ಅವರ ಪಾಲಿಗೆ ಹೂವಿನ ಹಾಸಿಗೆಯಾಗಿರುವುದಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಹಣಕಾಸು ಸೇವೆಗಳ ಬಗ್ಗೆ ಸಾಕಷ್ಟು ತಿಳಿವಳಿಕೆ ಮತ್ತು ಅಪಾರ ಅನುಭವ ಹೊಂದಿರುವ ಸಿನ್ಹಾ ಅವರ ನೇಮಕಾತಿಯು ಉತ್ತಮ ಆಯ್ಕೆಯಾಗಿದೆ ಎನ್ನುವ ಅಭಿಪ್ರಾಯವೂ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.