ನವದೆಹಲಿ(ಪಿಟಿಐ): ಹೊಸ ಬಗೆಯ ಸೈಬರ್ ಸ್ಪೈ ದಾಳಿ ಆತಂಕ ಎದುರಾಗಿ ರುವುದರಿಂದ ದೇಶದಲ್ಲಿನ ಎಲ್ಲ ಅಂತ ರ್ಜಾಲ ಸಂಪರ್ಕ ಸೇವಾ ಸಂಸ್ಥೆಗಳು ಜಾಗ್ರತೆ ವಹಿಸಬೇಕಿದೆ. ಗ್ರಾಹಕರಿಗೆ ಒದಗಿಸಿರುವ ಫಿಕ್ಸೆಡ್ ಲೈನ್ ಬ್ರಾಂಡ್ ಬ್ಯಾಂಡ್‌ನ ಪಾಸ್‌ವರ್ಡ್ ಮತ್ತು ಇತರೆ ಉಪಕರಣಗಳಲ್ಲಿ ‘ಸೆಟ್ಟಿಂಗ್ಸ್’ಗಳನ್ನು 60 ದಿನಗಳೊಳಗಾಗಿ ಬದಲಿಸಬೇಕಿದೆ ಎಂದು ದೂರಸಂಪರ್ಕ ಇಲಾಖೆ (ಡಿಒಟಿ) ಸೂಚನೆ ನೀಡಿದೆ.
ಜನವರಿಯಲ್ಲಿನ ಅಂಕಿ ಅಂಶ ಪ್ರಕಾರ ದೇಶದಲ್ಲಿ ಸ್ಥಿರ ದೂರವಾಣಿ ಮಾರ್ಗ ದಲ್ಲಿ ಅಂತರ್ಜಾಲ ಸಂಪರ್ಕ ಸೇವೆಗಾಗಿ ಒಟ್ಟು 1.45 ಕೋಟಿ ಮೋಡೆಮ್‌ಗಳು ಬಳಕೆಯಾಗುತ್ತಿವೆ. ಎಲ್ಲ ಅಂತರ್ಜಾಲ ಬಳಕೆದಾರರೂ ತಮ್ಮ ಪಾಸ್‌ವರ್ಡ್‌ಗ ಳನ್ನು ಬದಲಿಸಿಕೊಳ್ಳಲು ಮತ್ತು ಉಪಕ ರಣಗಳನ್ನು ‘ರಿಸೆಟ್’ ಮಾಡಿಕೊಳ್ಳಲು ಅಂತರ್ಜಾಲ ಸೇವಾ ಸಂಸ್ಥೆಗಳು ನೆರವಾ ಗಬೇಕು ಎಂದೂ ಇಲಾಖೆ ಹೇಳಿದೆ.
ರಕ್ಷಣಾ ಸಚಿವಾಲಯ, ಭದ್ರತಾ ಸಂಸ್ಥೆಗಳು, ದೆಹಲಿಯ ಬ್ಯಾಂಕ್‌ಗಳು ಸೇರಿದಂತೆ 3000 ಅಂತರ್ಜಾಲ ಸಂಪ ರ್ಕಗಳ ಮೇಲೆ ವಿದೇಶಿ ಸೈಬರ್ ಸ್ಪೈಗಳು ಕಳ್ಳಗಣ್ಣಿಟ್ಟಿರುವ ಶಂಕೆ ಇದೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರ ತಂಡ ‘ಇಂಡಿ ಯನ್ ಇನ್ಫೊಸೆಕ್ ಕನ್ಸೋರ್ಟಿಯಂ’ ನಿಂದ ಬಂದ ಮಾಹಿತಿ ಆಧರಿಸಿ ‘ಡಿಒಟಿ’ ಯಿಂದ ಸೂಚನೆ ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.