ADVERTISEMENT

ಸ್ಟ್ಯಾಂಡರ್ಡ್ ಚಿನ್ನ ರೂ780 ಇಳಿಕೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST

ಮುಂಬೈ (ಪಿಟಿಐ): ಹಣಕಾಸು ಮಾರುಕಟ್ಟೆ ಚೇತರಿಕೆಯಿಂದ ಕಳೆದ ಮೂರು ದಿನಗಳಿಂದ ಚಿನ್ನದ ಧಾರಣೆ ಸತತ ಇಳಿಕೆ ಕಾಣುತ್ತಿದೆ. ಶುಕ್ರವಾರ ಇಲ್ಲಿ ಸ್ಟ್ಯಾಂಡರ್ಡ್ ಚಿನ್ನದ ಧಾರಣೆ 10 ಗ್ರಾಂಗಳಿಗೆ ಮತ್ತೆ ರೂ780 ಇಳಿಕೆಯಾಗಿದ್ದು, ರೂ30,780ಕ್ಕೆ ತಗ್ಗಿದೆ. ಬೆಳ್ಳಿ ಬೆಲೆ ಕೆ.ಜಿ.ಗೆ ರೂ1,615 ಇಳಿಕೆ ಕಂಡಿದ್ದು ರೂ54,185ಕ್ಕೆ ಬಂದಿದೆ.

ಅಪರಂಜಿ ಚಿನ್ನದ ಬೆಲೆ ರೂ795 ಇಳಿಕೆ ಕಂಡಿದ್ದು 10 ಗ್ರಾಂಗಳಿಗೆ ರೂ30,930ಕ್ಕೆ ಜಾರಿದೆ. ದೆಹಲಿಯಲ್ಲಿ ಮಾತ್ರ ಚಿನ್ನದ ಧಾರಣೆ ರೂ50ರಷ್ಟು ಅಲ್ಪ ಪ್ರಮಾಣದ ಏರಿಕೆ ಕಂಡಿದ್ದು, 10 ಗ್ರಾಂಗಳಿಗೆ ರೂ31,000ರಷ್ಟಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.