ADVERTISEMENT

ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆ ಭಯ: ಬ್ಯಾಂಕ್‌ಗಳಿಗೆ ₹ 83,000 ಕೋಟಿ ಸಾಲ ಮರುಪಾವತಿ

ಏಜೆನ್ಸೀಸ್
Published 23 ಮೇ 2018, 4:29 IST
Last Updated 23 ಮೇ 2018, 4:29 IST
ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆ ಭಯ: ಬ್ಯಾಂಕ್‌ಗಳಿಗೆ ₹ 83,000 ಕೋಟಿ ಸಾಲ ಮರುಪಾವತಿ
ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆ ಭಯ: ಬ್ಯಾಂಕ್‌ಗಳಿಗೆ ₹ 83,000 ಕೋಟಿ ಸಾಲ ಮರುಪಾವತಿ   

ನವದೆಹಲಿ:  ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ‘ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆ‘ಯ (Insolvency and Bankruptcy Code– IBC) ಪರಿಣಾಮಕ್ಕೆ ಭೀತಿಗೊಂಡು  ವಿವಿಧ ಕಂಪನಿಗಳ ಪ್ರವರ್ತಕರು ಬಾಕಿ ಉಳಿಸಿಕೊಂಡ 83,000 ಕೋಟಿ ರೂ.ಗಳನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಿದ್ದಾರೆ.

ಸುಮಾರು 2100ಕ್ಕೂ ಹೆಚ್ಚು ಕಂಪೆನಿಗಳು 83,000 ಕೋಟಿ ರೂಪಾಯಿ ಮೊತ್ತವನ್ನು ಬ್ಯಾಂಕುಗಳಿಗೆ ಮರುಪಾವತಿ ಮಾಡಿವೆ.

ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದ ಮಾಹಿತಿ  ಪ್ರಕಾರ, 2,100ಕ್ಕೂ ಹೆಚ್ಚು ಕಂಪನಿಗಳು ಹಳೆಯ ಬ್ಯಾಂಕ್ ಬಾಕಿಯನ್ನು ಪಾವತಿಸಿವೆ.

ADVERTISEMENT

ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆಯ ಪ್ರಕಾರ  90 ದಿನಗಳ ಕಾಲ ಪಾವತಿಯಾಗದೆ ಉಳಿದ ಸಾಲವನ್ನು ಅನುತ್ಪಾದಕ ಸ್ವತ್ತು ಎಂದು ವರ್ಗಿಕರಿಸಲಾಗುತ್ತದೆ. ನಂತರ ಮಾಲೀಕರು ಅಥವಾ ಹೂಡಿಕೆದಾರರು ಕಂಪನಿಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.