ADVERTISEMENT

ಹಣದುಬ್ಬರ ಅಲ್ಪ ಚೇತರಿಕೆ

ಕೈಗಾರಿಕಾ ಕ್ಷೇತ್ರದಲ್ಲೂ ಆಶಾಕಿರಣ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ನವದೆಹಲಿ(ಪಿಟಿಐ): ದೇಶದಲ್ಲಿನ ಚಿಲ್ಲರೆ ವಹಿವಾಟು ಹಣದುಬ್ಬರ ಆಗಸ್ಟ್‌ನಲ್ಲಿ ಶೇ 0.12ರಷ್ಟು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜುಲೈ ನಲ್ಲಿ ಶೇ 9.64ರಷ್ಟಿದ್ದ ಗ್ರಾಹಕ ಬಳಕೆ ವಸ್ತುಗಳ ಧಾರಣೆಯ ಸೂಚ್ಯಂಕ (ಕನ್ ಷೂಮರ್‌ ಪ್ರೈಸ್‌ ಇಂಡೆಕ್ಸ್–ಸಿಪಿಐ), ಆಗಸ್ಟ್‌ನಲ್ಲಿ ಶೇ 9.52ಕ್ಕೆ ತಗ್ಗಿದೆ.

ತರಕಾರಿಗಳನ್ನು ಹೊರತುಪಡಿಸಿ ಬಹಳಷ್ಟು ದಿನಸಿ ಸಾಮಗ್ರಿಗಳ ಧಾರಣೆ ತುಸು ಇಳಿಮುಖವಾಗಿದ್ದರಿಂದ ಹಣದು ಬ್ಬರವೂ ಕಡಿಮೆಯಾಗಿದೆ. ಇದಕ್ಕೂ ಮುನ್ನ ಮಾರ್ಚ್‌ನಿಂದಲೂ ಕೆಳ ಮಟ್ಟ ದಲ್ಲಿಯೇ ಇದ್ದ ಚಿಲ್ಲರೆ ಹಣದು ಬ್ಬರ, ಜೂನ್‌ನಲ್ಲಿ ಕೊಂಚ ಏರಿಕೆ ಯಾಗಿತ್ತು.

ಸೆ. 20ರಂದು ಭಾರತೀಯ ರಿಸರ್ವ್ ಬ್ಯಾಂಕ್‌(ಆರ್‌ಬಿಐ) ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿ ಪರಾ ಮರ್ಶೆ ಪ್ರಕಟಿಸಲಿದೆ. ಈಗ ಹಣದುಬ್ಬ ರ ತಗ್ಗಿರುವುದರಿಂದ ಆರ್‌ಬಿಐ ಬಡ್ಡಿ ದರ  ಕಡಿತ ಮಾಡುವ ಬಗ್ಗೆ ಚಿಂತಿಸ ಬಹುದು ಎಂಬ ನಿರೀಕ್ಷೆ ಮೂಡಿದೆ.

ಐಐಪಿ ಚೇತರಿಕೆ
ಇದೇ ವೇಳೆ, ದೇಶದ ಕೈಗಾರಿಕಾ ವಲಯದಿಂದಲೂ ಆಶಾದಾಯಕ ಸುದ್ದಿ ಹೊರಬಿದ್ದಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಜುಲೈನಲ್ಲಿ ಚೇತರಿಕೆ ಕಂಡುಬಂದಿದೆ.
ಜುಲೈನಲ್ಲಿನ ಕೈಗಾರಿಕಾ ಕ್ಷೇತ್ರದ ಉತ್ಪಾದನೆ ಸೂಚ್ಯಂಕ(ಐಐಪಿ) ಶೇ 2.6ರ ಮಟ್ಟಕ್ಕೇರಿದೆ. ಜೂನ್‌ನಲ್ಲಿ ‘ಐಐಪಿ’ ಶೇ 1.78ರಷ್ಟು ಕಳಪೆ ಸಾಧನೆ ತೋರಿತ್ತು.

ಪರಿಕರ ತಯಾರಿಕಾ ವಲಯ ದಿಂದಲೂ ಉತ್ತಮ ಸಾಧನೆ ಯಾಗಿದೆ. 2012ರ ಜುಲೈನಲ್ಲಿ ಶೂನ್ಯ ಸಾಧನೆ ತೋರಿದ್ದ ತಯಾರಿಕಾ ಕ್ಷೇತ್ರ, 2013ರ ಜುಲೈನಲ್ಲಿ ಶೇ 3ರಷ್ಟು ಬೆಳವ ಣಿಗೆ ತೋರಿದೆ. ವಿದ್ಯುತ್‌ ಉತ್ಪಾದನೆ ವಿಭಾ ಗದಿಂದಲೂ ಶೇ 5.2ರಷ್ಟು ಸಾಧನೆ ಯಾಗಿದೆ. ಕಳೆದ ವರ್ಷದ ಜುಲೈನಲ್ಲಿ ವಿದ್ಯುತ್‌ ಕ್ಷೇತ್ರ ಕೇವಲ ಶೇ 2.8ರಷ್ಟು ಪ್ರಗತಿ ದಾಖಲಿಸಿತ್ತು. ಆದರೆ, ಗಣಿಗಾ ರಿಕೆ ವಿಭಾಗದಲ್ಲಿ ಶೇ 2.3ರಷ್ಟು ಕುಸಿತ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.