ADVERTISEMENT

ಹರ್ಮಲ್‌ ಶ್ರೇಣಿಯ ಕೈಗಡಿಯಾರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 20:06 IST
Last Updated 19 ಮಾರ್ಚ್ 2018, 20:06 IST
ಹರ್ಮಲ್‌ನ ಅಂತರರಾಷ್ಟ್ರೀಯ ಮಾರಾಟ ನಿರ್ದೇಶಕ ಜೆನ್ಸ್ ಕ್ವಾಯೆಕ್ ಅವರು ಗಡಿಯಾರಗಳನ್ನು ಪರಿಚಯಿಸಿದರು
ಹರ್ಮಲ್‌ನ ಅಂತರರಾಷ್ಟ್ರೀಯ ಮಾರಾಟ ನಿರ್ದೇಶಕ ಜೆನ್ಸ್ ಕ್ವಾಯೆಕ್ ಅವರು ಗಡಿಯಾರಗಳನ್ನು ಪರಿಚಯಿಸಿದರು   

ಬೆಂಗಳೂರು: ಜರ್ಮನಿಯ ಗಡಿಯಾರ ತಯಾರಕ ಕಂಪನಿ ಹರ್ಮಲ್‌, ತನ್ನ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ವೈವಿಧ್ಯಮಯ ಟೇಬಲ್ ಕ್ಲಾಕ್‍, ಗೋಡೆ ಗಡಿಯಾರಗಳನ್ನು ಪರಿಚಯಿಸಲಾಗಿದೆ. ಭಾರತದಲ್ಲಿ ಗಡಿಯಾರಗಳ ವಿಲಾಸಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಉದ್ದೇಶಿಸಲಾಗಿದೆ.

‘ಜರ್ಮನಿಯ ನಿಖರ ಎಂಜಿನಿಯರಿಂಗ್ ತಂತ್ರಜ್ಞಾನಕ್ಕೆ ಹರ್ಮಲ್‌ ಇನ್ನೊಂದು ಹೆಸರಾಗಿದೆ. ಈ ಗಡಿಯಾರಗಳ ಬಗ್ಗೆ ಭಾರತದಲ್ಲಿ ಆಸಕ್ತಿ ಹೆಚ್ಚಾಗುತ್ತಿರುವುದರಿಂದ ಉತ್ತಮ ಸಂಖ್ಯೆಯ ಮಾರಾಟ ನಿರೀಕ್ಷಿದ್ದೇವೆ’ ಎಂದು ಸಂಸ್ಥೆಯ ಅಂತರರಾಷ್ಟ್ರೀಯ ಮಾರಾಟ ನಿರ್ದೇಶಕ ಜೆನ್ಸ್ ಕ್ವಾಯೆಕ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ADVERTISEMENT

ಹರ್ಮಲ್‌, ಈ ಗಡಿಯಾರಗಳ ಶ್ರೇಣಿಯನ್ನು ಸ್ಕೈಲಾರ್ಕ್ ಟ್ರೇಡಿಂಗ್ ಕಂಪನಿಯ ಸಹಯೋಗದಲ್ಲಿ ವಿತರಿಸುತ್ತದೆ. ಈ ಗಡಿಯಾರಗಳ ಬೆಲೆ ₹ 20 ಸಾವಿರದಿಂದ ₹ 2 ಲಕ್ಷದವರೆಗೆ ಇದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.