ADVERTISEMENT

ಹಾರ್ಲೆ ಡೇವಿಡ್ಸನ್‌ನಿಂದ 4 ಹೊಸ ಬೈಕ್‌

ಪಿಟಿಐ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಹಾರ್ಲೆ ಡೇವಿಡ್ಸನ್‌ನಿಂದ 4 ಹೊಸ ಬೈಕ್‌
ಹಾರ್ಲೆ ಡೇವಿಡ್ಸನ್‌ನಿಂದ 4 ಹೊಸ ಬೈಕ್‌   

ನವದೆಹಲಿ: ಅಮೆರಿಕದ ಹಾರ್ಲೆ ಡೇವಿಡ್ಸನ್ ಕಂಪೆನಿ ಭಾರತದ ಮಾರುಕಟ್ಟೆಗೆ ನಾಲ್ಕು ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಸ್ಟ್ರೀಟ್‌ ಬಾಬ್‌, ಫ್ಯಾಟ್‌ ಬಾಬ್‌, ಫ್ಯಾಟ್‌ ಬಾಯ್‌ ಮತ್ತು ಹೆರಿಟೇಜ್‌ ಕ್ಲಾಸ್‌ ಎಂಬ ನಾಲ್ಕು ಹೊಸ ಮಾದರಿಗಳನ್ನು ಪರಿಚಯಿಸಿದೆ. ದೆಹಲಿ ಷೋರೂಂನಲ್ಲಿ ಇವುಗಳ ಬೆಲೆ ₹11.99 ಲಕ್ಷದಿಂದ ₹18.99 ಲಕ್ಷದವರೆಗಿದೆ.

ಈ ನಾಲ್ಕು ಮಾದರಿಗಳಲ್ಲಿ ಹೊಸ ಎಂಜಿನ್‌ಗಳಿದ್ದು, ಅತ್ಯಂತ ಹಗುರಾಗಿವೆ. ಅತಿ ಹೆಚ್ಚಿನ  ವೇಗದಿಂದ ಚಲಿಸಬಲ್ಲವು. ಹಿಂದಿನ ಆವೃತ್ತಿಗಳಿಗಿಂತಲೂ ಹೆಚ್ಚು ಉತ್ತಮವಾಗಿ ನಿರ್ವಹಣೆ ಮಾಡಬಹುದು ಎಂದು ಕಂಪೆನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಪೀಟರ್‌ ಮೆಕೆಂಜಿ ತಿಳಿಸಿದ್ದಾರೆ.

ADVERTISEMENT

ಕಂಪೆನಿಯು ಭಾರತದಲ್ಲಿ 27 ಡೀಲರ್‌ಶಿಪ್‌ ಮಳಿಗೆಗಳ ಮೂಲಕ 14 ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.