ADVERTISEMENT

ಹೆಚ್ಚಲಿದೆ ಆನ್‌ಲೈನ್‌ ಖರೀದಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 19:30 IST
Last Updated 27 ಫೆಬ್ರುವರಿ 2018, 19:30 IST

ದೇಶದಲ್ಲಿ ಅಂತರ್ಜಾಲ ವಹಿವಾಟು (ಆನ್‌ಲೈನ್‌) ಹೆಚ್ಚಾಗುತ್ತಿದೆ. 2020ರ ವೇಳೆಗೆ ಈ ವಹಿವಾಟಿನ ಮೊತ್ತವು ಶೇ 2.5 ರಷ್ಟು ಏರಿಕೆ ಕಾಣಲಿದ್ದು, ₹ 6.4 ಲಕ್ಷ ಕೋಟಿಗೆ ತಲುಪಲಿದೆ.

ಸದ್ಯ ಭಾರತೀಯರ ಆನ್‌ಲೈನ್‌ ಖರೀದಿ ಮೊತ್ತವು ₹ 2.56 ಲಕ್ಷ ಕೋಟಿಗಳಷ್ಟು ಇದೆ. ಇ–ಕಾಮರ್ಸ್‌, ಪ್ರಯಾಣ, ಹೋಟೆಲ್‌, ಹಣಕಾಸು ಸೇವೆಗಳು ಮತ್ತು ಡಿಜಿಟಲ್‌ ಪಾವತಿ ಬಳಕೆ ವೇಗ ಹೆಚ್ಚಾಗಿರುವುದರಿಂದ ಖರೀದಿ ಪ್ರಮಾಣದಲ್ಲಿಯೂ ಏರಿಕೆ ಕಂಡುಬರಲಿದೆ ಎಂದು ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ ಮತ್ತು ಗೂಗಲ್‌ ನಡೆಸಿರುವ ಜಂಟಿ ಅಧ್ಯಯನದ ವರದಿ ತಿಳಿಸಿದೆ.

ದೇಶದಲ್ಲಿ ಡಿಜಿಟಲ್‌ ವಹಿವಾಟು ನಡೆಸುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಚೀನಾಕ್ಕೆ ಹೋಲಿಸಿದರೆ ಮೂವರಲ್ಲಿ ಒಬ್ಬರು ಮತ್ತು ಅಮೆರಿಕಕ್ಕೆ ಹೋಲಿಸಿದರೆ ನಾಲ್ವರಲ್ಲಿ ಒಬ್ಬರು ಮಾತ್ರ ಡಿಜಿಟಲ್‌ ವಹಿವಾಟು ನಡೆಸುತ್ತಿದ್ದಾರೆ.

ADVERTISEMENT

‘ಕಳೆದ ಕೆಲವು ವರ್ಷಗಳಿಂದೀಚೆಗೆ ಹೊಸ ರೀತಿಯ ಡಿಜಿಟಲ್‌ ಪಾವತಿ ಸೇವೆಗಳ ಬಳಕೆಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಗೂಗಲ್‌ ಇಂಡಿಯಾದ ಉದ್ಯಮದ ನಿರ್ದೇಶಕ ನಿತಿನ್‌ ಬವನ್‌ಕುಲೆ  ತಿಳಿಸಿದ್ದಾರೆ.

‘ಉದ್ಯಮದ ಪ್ರಗತಿಗೆ ವಿಭಿನ್ನ ಕ್ರಮಗಳ ಅಗತ್ಯವಿದೆ’ ಎಂದು ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ನ ಇಂಡಿಯಾದ ನಿರ್ದೇಶಕಿ ನಿಮಿಷಾ ಜೈನ್‌ ಹೇಳಿದ್ದಾರೆ.

***

ಆನ್‌ಲೈನ್‌ ಉದ್ಯಮದ ಬೆಳವಣಿಗೆ ನಿರೀಕ್ಷೆ

  ಸದ್ಯ 2020ರಲ್ಲಿ

ಇ–ಕಾಮರ್ಸ್‌ ₹ 1.12 ₹ 2.56 (ಲಕ್ಷ ಕೋಟಿ)

ಡಿಜಿಟಲ್‌ ಪಾವತಿ ₹ 70,400 ಕೋಟಿ ₹ 2.56 ಲಕ್ಷ ಕೋಟಿ

ಹಣಕಾಸು ಸೇವೆ ₹ 76,800 ಕೋಟಿ ₹ 1.92 ಲಕ್ಷ ಕೋಟಿ

***

₹ 4.3 ಕೋಟಿ –  ಆನ್‌ಲೈನ್‌ ಬಳಕೆದಾರರ ಸಂಖ್ಯೆ

2.5 ಪಟ್ಟು      –  2020ರ ವೇಳೆಗೆ ಹೆಚ್ಚಾಗಲಿರುವ ಮಹಿಳಾ ಗ್ರಾಹಕರ ಪ್ರಮಾಣ

50%           – 2020ರ ವೇಳೆಗೆ ಒಟ್ಟು ಆನ್‌ಲೈನ್‌ ಷಾಪಿಂಗ್‌ನಲ್ಲಿ  ನಗರಗಳ ಪಾಲು

5:1             – ಅಂತರ್ಜಾಲ ಬಳಕೆದಾರರಲ್ಲಿ ಆನ್‌ಲೈನ್‌ ಷಾಪಿಂಗ್‌ ಮಾಡುವವರ ಅನುಪಾತ

6:1             – ಆನ್‌ಲೈನ್‌ನಲ್ಲಿ ಪ್ರಯಾಣದ ಟಿಕೆಟ್‌ ಬುಕ್‌ ಮಾಡುವವರ ಅನುಪಾತ

75–80%     – ಅಂತರ್ಜಾಲ ಬಳಸುತ್ತಿದ್ದರೂ ಆನ್‌ಲೈನ್‌ನಲ್ಲಿ ಖರೀದಿ ನಡೆಸದೇ ಇರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.