ನವದೆಹಲಿ(ಪಿಟಿಐ): 2012–13 ಮತ್ತು 2013–14ನೇ ಸಾಲಿನ ಮೂಲದಲ್ಲೇ ತೆರಿಗೆ ಕಡಿತದ(ಟಿಡಿಎಸ್) ವಿವರ ಸಲ್ಲಿಸಲು ನಿಗದಿಪಡಿಸಿದ್ದ ಗಡುವನ್ನು ತೆರಿಗೆ ಇಲಾಖೆ ಮಾ. 31ರವರೆಗೆ ವಿಸ್ತರಿಸಿದೆ.
ಗಡುವು ವಿಸ್ತರಣೆ ಕೋರಿ ಹಲವು ಕಂಪೆನಿಗಳು ‘ಕೇಂದ್ರ ನೇರ ತೆರಿಗೆ ಮಂಡಳಿ’ಗೆ (ಸಿಬಿಡಿಟಿ) ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ 2012–13ನೇ ಸಾಲಿನ 2, 3 ಮತ್ತು 4ನೇ ತ್ರೈಮಾಸಿಕ ಹಾಗೂ 2013–14ನೇ ಸಾಲಿನ 1, 2 ಮತ್ತು 3ನೇ ತ್ರೈಮಾಸಿಕದ ಟಿಡಿಎಸ್ ವಿವರ ಸಲ್ಲಿಕೆ ಗಡುವು ವಿಸ್ತರಿಸಲಾಗಿದೆ ಎಂದು ‘ಸಿಬಿಡಿಟಿ’ ಪ್ರಕಟಣೆ ತಿಳಿಸಿದೆ.
ಖಾಸಗಿ ಅಥವಾ ಸರ್ಕಾರಿ ಕ್ಷೇತ್ರದ ಯಾವುದೇ ಕಂಪೆನಿ ನಿಗದಿತ ಸಮಯದೊಳಗೆ ‘ಟಿಡಿಎಸ್’ ವಿವರ ಸಲ್ಲಿಸದಿದ್ದರೆ ಕನಿಷ್ಠ ₨200ರಿಂದ ಗರಿಷ್ಠ ₨1ಲಕ್ಷದವರೆಗೆ ದಂಡ ವಿಧಿಸುವುದಾಗಿ ‘ಸಿಬಿಡಿಟಿ’ ಎಚ್ಚರಿಕೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.