ನವದೆಹಲಿ(ಪಿಟಿಐ): ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನಕ್ಕೆ ಶೇ. 5ರಷ್ಟು ಬೇಡಿಕೆ ಹೆಚ್ಚಿದ್ದು, ದೇಶದಲ್ಲಿ ಮಂಗಳವಾರ 15 ಟನ್ ಬಂಗಾರ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಚಿನಿವಾರ ಪೇಟೆ ವರ್ತಕರು ಅಂದಾಜು ಮಾಡಿದ್ದಾರೆ.
ವಿದೇಶದಲ್ಲಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಕುಸಿದಿದ್ದರೂ, ಭಾರತದಲ್ಲಿ ಶುಭದಿನ ನಂಬಿಕೆ ಮೇಲೆ ಖರೀದಿ ಭರಾಟೆ ಜೋರಾಗಿದೆ. ಒಂದೇ ದಿನ 4 ಸಾವಿರ ಕೋಟಿ ರೂಪಾಯಿ (ಕಳೆದ ವರ್ಷಕ್ಕಿಂತ ಶೇ. 15ರಷ್ಟು ಅಧಿಕ) ವಹಿವಾಟು ನಿರೀಕ್ಷಿಸಲಾಗಿದೆ ಎಂದು ದೆಹಲಿ ಚಿನ್ನ ಮತ್ತು ಆಭರಣ ವರ್ತಕರ ಸಂಘ ಸೋಮವಾರ ಹೇಳಿದೆ.
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಸೋಮವಾರ 10 ಗ್ರಾಂಗೆ ರೂ. 29,070ರಷ್ಟಾಗಿದ್ದು, ಕಳೆದ 3 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.