ನವದೆಹಲಿ(ಪಿಟಿಐ): ತಯಾರಿಕೆ ಉದ್ಯಮ ವಲಯದಲ್ಲಿ 12ನೇ ಪಂಚ ವಾರ್ಷಿಕ ಯೋಜನೆ (2012; 17) ಅವಧಿಯಲ್ಲಿ 32 ಲಕ್ಷ ಉದ್ಯೋಗ ಸೃಷ್ಟಿ ಯಾಗಲಿವೆ ಎಂದು ‘ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ’ (ಅಸೋಚಾಂ) ಹೇಳಿದೆ.
ಸದ್ಯ ದೇಶದ ಆರ್ಥಿಕ ಪ್ರಗತಿಯಲ್ಲಿ ಚೇತರಿಕೆ ಕಂಡುಬಂದಿರುವುದರಿಂದ ತಯಾರಿಕೆ ವಲಯದಲ್ಲೂ ತುಸು ಸುಧಾರಣೆ ಕಂಡುಬಂದಿದೆ. ಇದರಿಂದ ಮುಂದಿನ ವರ್ಷಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದು ‘ಅಸೋಚಾಂ’ ಇತ್ತೀಚೆಗೆ ನಡೆ ಸಿದ ಅಧ್ಯಯನ ತಿಳಿಸಿದೆ.
11ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ತಯಾರಿಕೆ ಉದ್ಯಮ ವಿಭಾಗದ ಉದ್ಯೋಗಾವಕಾಶ ಸೃಷ್ಟಿ ಯಲ್ಲಿ ಶೇ 28.5ರಷ್ಟು ಹೆಚ್ಚಳ ಕಂಡು ಬಂದಿತ್ತು. 2007; 12ರಲ್ಲಿ ಹೆಚ್ಚುವರಿ ಯಾಗಿ 29 ಲಕ್ಷ ಮಂದಿಗೆ ನೌಕರಿ ದೊರ ಕಿದಂತಾಗಿತ್ತು. ಇದರಲ್ಲಿ ತಮಿಳುನಾಡಿ ನಲ್ಲಿನ ನೋಂದಾಯಿತ ಉದ್ಯಮ ಸಂಸ್ಥೆ ಗಳಿಂದಲೇ ಹೆಚ್ಚಿನ (14.5ರಷ್ಟು) ಉದ್ಯೋಗಗಳು ಜನರಿಗೆ ದೊರಕಿದ್ದವು.
ಮಹಾರಾಷ್ಟ್ರದಲ್ಲಿ ಶೇ 14 ಮತ್ತು ಗುಜರಾತ್‌ನಲ್ಲಿ ಶೇ 10ರಷ್ಟು ಉದ್ಯೋ ಗಾವಕಾಶ ಸೃಷ್ಟಿಯಾಗಿತ್ತು.