ADVERTISEMENT

ಚಿನ್ನದ ಇಟಿಎಫ್‌ಗೆ ನಿರಾಸಕ್ತಿ

ಪಿಟಿಐ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ಚಿನ್ನದ ಇಟಿಎಫ್‌ಗೆ ನಿರಾಸಕ್ತಿ
ಚಿನ್ನದ ಇಟಿಎಫ್‌ಗೆ ನಿರಾಸಕ್ತಿ   

ನವದೆಹಲಿ : ಹೂಡಿಕೆದಾರರು  ಚಿನ್ನದ ವಿನಿಮಯ ವಹಿವಾಟು ನಿಧಿಗಳಿಂದ (ಇಟಿಎಫ್‌) ಬಂಡವಾಳ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಮುಂದುವರಿದಿದೆ.

2017ರಲ್ಲಿ ಒಟ್ಟಾರೆ ₹ 730 ಕೋಟಿ ಬಂಡವಾಳ ಮರಳಿ ಪಡೆದಿದ್ದಾರೆ. ಹೀಗಾಗಿ ಸತತ ಐದನೇ ವರ್ಷವೂ ಬಂಡವಾಳ ಹೊರಹರಿವು ಆದಂತಾಗಿದೆ ಎಂದು ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ. ಷೇರುಗಳ ಮೇಲಿನ ಹೂಡಿಕೆಯಿಂದ ಹೆಚ್ಚು ಗಳಿಕೆ ಬರುತ್ತಿದೆ. ಹೀಗಾಗಿ ಕಳೆದ ಕೆಲವು ವರ್ಷಗಳಿಂದಲೂ ಚಿಲ್ಲರೆ ಹೂಡಿಕೆದಾರರು ಚಿನ್ನದ ಇಟಿಎಫ್‌ಗಿಂತಲೂ ಷೇರುಗಳ ಮೇಲೆಯೇ ಹೆಚ್ಚು ಬಂಡವಾಳ ತೊಡಗಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT