ADVERTISEMENT

ಬಡ್ಡಿ ಸಬ್ಸಿಡಿ: ಅಲಹಾಬಾದ್‌ ಬ್ಯಾಂಕ್‌ ಜತೆ ಕೇಂದ್ರ ಒಪ್ಪಂದ

ಪಿಟಿಐ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST
ಗೃಹ ನಿರ್ಮಾಣ ಮತ್ತು ನಗರ ವ್ಯವಹಾರಗಳ ಕೇಂದ್ರ (ಸ್ವತಂತ್ರ ಖಾತೆ) ಸಚಿವ ಹರ್ದೀಪ್‌ ಸಿಂಗ್ ಪುರಿ, ಜಂಟಿ ಕಾರ್ಯದರ್ಶಿ ಸಂಜಯ್‌ ಕುಮಾರ್‌ ಮತ್ತು ಅಲಹಾಬಾದ್‌ ಬ್ಯಾಂಕ್‌ನ ಸಿಇಒ ಉಷಾ ಅನಂತಸುಬ್ರಮಣಿಯನ್‌ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು
ಗೃಹ ನಿರ್ಮಾಣ ಮತ್ತು ನಗರ ವ್ಯವಹಾರಗಳ ಕೇಂದ್ರ (ಸ್ವತಂತ್ರ ಖಾತೆ) ಸಚಿವ ಹರ್ದೀಪ್‌ ಸಿಂಗ್ ಪುರಿ, ಜಂಟಿ ಕಾರ್ಯದರ್ಶಿ ಸಂಜಯ್‌ ಕುಮಾರ್‌ ಮತ್ತು ಅಲಹಾಬಾದ್‌ ಬ್ಯಾಂಕ್‌ನ ಸಿಇಒ ಉಷಾ ಅನಂತಸುಬ್ರಮಣಿಯನ್‌ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು   

ನವದೆಹಲಿ: ದೀನ್‌ದಯಾಳ್‌ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯ (ಡಿಎವೈ ಮತ್ತು ಎನ್‌ಯುಎಲ್‌ಎಂ) ಸ್ವ ಉದ್ಯೋಗ ಫಲಾನುಭವಿಗಳಿಗೆ ಬಡ್ಡಿ ಸಬ್ಸಿಡಿಯನ್ನು ತ್ವರಿತವಾಗಿ ಒದಗಿಸಲು ಕೇಂದ್ರ ಸರ್ಕಾರವು ಅಲಹಾಬಾದ್‌ ಬ್ಯಾಂಕ್‌ ಜತೆ ಒಪ್ಪಂದ ಮಾಡಿಕೊಂಡಿದೆ.

ಗೃಹನಿರ್ಮಾಣ ಮತ್ತು ನಗರ ಬಡತನ ನಿವಾರಣಾ ಸಚಿವಾಲಯವು ಅಲಹಾಬಾದ್‌ ಬ್ಯಾಂಕ್‌ ಜತೆ ಈ ಒಪ್ಪಂದ ಮಾಡಿಕೊಂಡಿದೆ. ಅರ್ಹ ಫಲಾನುಭವಿಗಳ ಬಡ್ಡಿ ಸಬ್ಸಿಡಿ ಸೌಲಭ್ಯವನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಜಾರಿಗೆ ತರಲು ಈ ಒಪ್ಪಂದ ನೆರವಾಗಲಿದೆ.

‘ಎನ್‌ಯುಎಲ್‌ಎಂ’ ಯೋಜನೆಯ ಬಡ್ಡಿ ಸಬ್ಸಿಡಿ ಸೌಲಭ್ಯ ಒದಗಿಸುವ ಉದ್ದೇಶಕ್ಕೆಂದೆ ಪ್ರತ್ಯೇಕ ಅಂತರ್ಜಾಲ ತಾಣ ರೂಪಿಸಲಾಗಿದೆ. ಸಬ್ಸಿಡಿಯನ್ನು ನಗದು ನೇರ ವರ್ಗಾವಣೆ ಸೌಲಭ್ಯದಡಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುವುದು. ಬ್ಯಾಂಕ್‌ಗಳು ಮತ್ತು ನಗರಗಳಲ್ಲಿನ ಸ್ಥಳೀಯ ಸಂಸ್ಥೆಗಳು ಮಂಜೂರು ಮಾಡಿದ ಸಾಲಗಳನ್ನು ದೃಢೀಕರಿಸುವುದಕ್ಕೂ ಈ ಅಂತರ್ಜಾಲ ತಾಣ ನೆರವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.